×
Ad

​ಹರಿಹರ: ಎಸಿಬಿ ಬಲೆಗೆ ಎಸ್‌ಡಿಎ

Update: 2017-04-14 23:31 IST

ಹರಿಹರ, ಎ.14: ನಗರದ ತಾಲೂಕು ಕಚೇರಿಯಲ್ಲಿ ಕಂದಾಯ ಶಾಖೆಯ ಸಿಬ್ಬಂದಿ ಎಸ್‌ಡಿಎ ಅಂಜಿನಪ್ಪಜಮೀನು ಹಕ್ಕುಪತ್ರ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಎಸಿಬಿಗೆ ಬಲೆಗೆ ಬಿದ್ದಿದ್ದಾರೆ. ರಾಜನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಮಾಳ ಜಮೀನಿಗೆ ಸಂಬಂಧ ಪಟ್ಟಂತೆ ಹಕ್ಕುಪತ್ರ ನೀಡುವ ಸಲುವಾಗಿ ಹಲಸಬಾಳು ಗ್ರಾಮ ಪಂಚಾಯತ್ ಸದಸ್ಯ ಬಸವರಾಜಪ್ಪ ಎಂಬವರಿಂದ ಒಂದು ಕಡತಕ್ಕೆ ಏಳು ಸಾವಿರ ರೂ.ಯಂತೆ ಆರು ಕಡತಕ್ಕೆ 42 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.


  ಈ ಸಂಬಂಧ ಬಸವರಾಜಪ್ಪ ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಕವಳಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಂದಭರ್, ಗೋಮಾಳ ಜಮೀನಿನ ಹಕ್ಕುಪತ್ರ ನೀಡುವಲ್ಲಿ ಹರಿಹರ ತಾಲೂಕಿನಲ್ಲಿ ಸುಮಾರು 1 ಸಾವಿರಕ್ಕೂ ಅರ್ಜಿಗಳು ವಿಲೇವಾರಿಯಾಗಬೇಕಾಗಿದ್ದು, ಅಂದಾಜು 70 ಲಕ್ಷ ರೂ.ಡೀಲ್ ಇದಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಪ್ರಕಾಶ ಪಾಟೀಲ್, ಸಿಬ್ಬಂದಿ ಕಲ್ಲೇಶ್, ಮೋಹನ್, ಸಂತೋಷ್, ವೀರೇಶ್, ಮಾರುತಿ, ಬಸವರಾಜ, ಧನಂಜಯ್‌ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News