ಬ್ಲಾಕ್‌ಮೇಲ್ ಪ್ರಕರಣ: ಖಾಸಗಿ ವಾಹಿನಿಯ ಸಿಇಒ ಬಂಧನ
Update: 2017-04-15 12:18 IST
ಬೆಂಗಳೂರು, ಎ.15: ಉದ್ಯಮಿಯೊಬ್ಬರಿಗೆ ಬ್ಲಾಕ್‌ಮೇಲ್ ಮಾಡಿದ ಆರೋಪದಲ್ಲಿ ಜನಾರ್ದನ್ ರೆಡ್ಡಿ ಒಡೆತನದ ಜನಶ್ರೀ ವಾಹಿನಿಯ ಸಿಇಒ ಲಕ್ಷ್ಮೀ ಪ್ರಸಾದ್ ವಾಜಪೇಯಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಯೊಬ್ಬರಿಂದ 15 ಕೋ.ರೂ. ಬೇಡಿಕೆ ಇಟ್ಟಿದ್ದ ವಾಜಪೇಯಿ ಖಾಸಗಿ ಹೊಟೇಲ್‌ನಲ್ಲಿ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಮುಫ್ತಿಯಲ್ಲಿದ್ದ ಪೊಲೀಸರು ವಾಜಪೇಯಿ ಅವರನ್ನು ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
ವಾಜಪೇಯಿ ಅವರ ಬ್ಲಾಕ್‌ಮೇಲ್‌ಗೆ ನೊಂದಿದ್ದ ಉದ್ಯಮಿ ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.