ಬೆಂಕಿ ಆಕಸ್ಮಿಕ: ಮಹಿಳೆ ಸಜೀವ ದಹನ
Update: 2017-04-15 12:31 IST
ತುಮಕೂರು, ಎ.15: ಬೆಂಕಿ ಆಕಸ್ಮಿಕಕ್ಕೆ ಮಹಿಳೆಯೊಬ್ಬರ ಸಹಿತ ಮನೆಯೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಮೃತರನ್ನು ಪಾರ್ವತಮ್ಮ(65) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಇವರೊಬ್ಬರೇ ಮನೆಯಲ್ಲಿದ್ದರೆನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಮನೆಯಲ್ಲಿದ್ದ ಪಾರ್ವತಮ್ಮ ಅವರ ಇಬ್ಬರು ಮೊಮ್ಮಕ್ಕಳು ತಮ್ಮ ಊರಿಗೆ ತೆರಳಿದ್ದರಿಂದ ಅವರಿಬ್ಬರು ಪಾರಾಗಿದ್ದಾರೆ.
ಮುಂಜಾವ ಸಂಭವಿಸಿದ ಈ ಭೀಕರ ದುರಂತದಿಂದ ಇಡೀ ಗ್ರಾಮವೇ ಸ್ತಬ್ಧಗೊಂಡಿದೆ.
ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.