×
Ad

ಎ.16ಕ್ಕೆ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ವಿಜೇತ ಡಾ.ರಾಮ್ ಪುನಿಯಾನಿ ಭಟ್ಕಳಕ್ಕೆ

Update: 2017-04-15 18:06 IST

ಭಟ್ಕಳ,ಎ.15: ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ವಿಜೇತ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂಬೈನ ವಿಶ್ರಾಂತ ಪ್ರಾಧ್ಯಾಪಕ ಡಾ.ರಾಮ್ ಪುನಿಯಾನ್ ಎ.16ರಂದು ನವಾಯತ್ ಕಾಲನಿಯ ತಂಝೀಮ್ ಮೈದಾನದಲ್ಲಿ ನಡೆಯುವ ಯುವ ನಾಯಕತ್ವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಕಾರ್ಯದರ್ಶಿ ಅಬ್ದುಲ್ ವಾಜೀದ್ ಕೋಲಾ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ  ಅಧ್ಯಕ್ಷತೆಯನ್ನು ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೌಲಾನ ಅಬುಲ್ ಹಸನ್ ಅಲಿ ನದ್ವಿ ,ಇಸ್ಲಾಮಿಕ್ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ,ಬೆಂಗಳೂರು  ಬ್ರೇನಿಸ್ಟ್ರಾರ್ಸ್‌ ಇಂಡಿಯಾ ಲಿಮಿಟೆಡ್ ನ ಕಾರ್ಯನಿರ್ವಾಹಣಾಧಿಕಾರಿ ಸೈಯ್ಯದ್ ತನ್ವೀರ್ ಅಹ್ಮದ್  ಭಾಗವಹಿಸಲಿದ್ದಾರೆಂದು  ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News