×
Ad

ಸಚಿವರ ಸೂಚನೆ ಉಲ್ಲಂಘಿಸಿ ವಾಣಿಜ್ಯ ಸಂಕೀರ್ಣ ಉಧ್ಘಾಟನೆ: ಕ್ರಮ ಜರುಗಿಸಲು ಒತ್ತಾಯ

Update: 2017-04-15 18:21 IST

ಚಿಕ್ಕಮಗಳೂರು, ಎ.15: ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಯಪಯೋಜನೆಗಳಡಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರದ ಮೂಲಕ ಉಧ್ಘಾಟನೆ ನಡೆಸಿರುವುದರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರಸಭೆ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ ಅಭಿವೃದ್ಧಿಪಡಿಸಿರುವ ನಗರದ ಮಹಾತ್ಮಗಾಂಧಿ ರಸ್ತೆ, ನಗರಸಭಾ ನಿಧಿಯಡಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳನ್ನು ಏಕಪಕ್ಷೀಯವಾಗಿ ಎ.14ರಂದು ಬೆಳಿಗ್ಗೆ 10 ಗಂಟೆಗೆ ಉಧ್ಘಾಟಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಮನವಿಯಲ್ಲಿ ನಗರಸಭೆ ಸದಸ್ಯರು ತಿಳಿಸಿದ್ದಾರೆ

ಈ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಬಗ್ಗೆ ನಗರಸಭೆಯು  ಸಭೆಯಲ್ಲಿ ಪ್ರಸ್ತಾಪಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಉಲ್ಲಂಘಿಸಿ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿರುವ ಅಧಿಕಾರಿಗಳ ಮೇಲೆ ನಿದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಈ ಸಮಯದಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯರಾದ ರೂಬೆನ್ ಮೋಸೇಸ್, ಎಚ್.ಎಸ್.ಪುಟ್ಟಸ್ವಾಮಿ, ಸುರೆಖಾ ಸಂಪತ್ ರಾಜ್, ತೇಜಕುಮಾರ್, ಅನುಮಧುಕರ್, ಯಶೋಧಾ ಗಂಗಾಧರ್, ಅಸ್ಮಾಖಾನಂ, ಸವಿತಾ ಆನಂಧ್, ಯತೀರಾಜ್ ನಾಯ್ಡು, ಸಿ.ಜಿ.ಗುರುಸ್ವಾಮಿ, ಜೇವ್ಸ್ ಡಿಸೋಜಾ, ಪಾತಿಮಾ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್.ವಿಜ್ ಕುಮಾರ್, ಸಿಡಿಎ ಅಧ್ಯಕ್ಷ ಸೈಯ್ಯದ್ ಹನೀಪ್, ಮಾಜಿ ಎಂಲೆಸಿ ಎ.ವಿ.ಗಾಯತ್ರಿ ಶಾಂತೇಗೌಡ, ಅರಣ್ಯ ವಸತಿ ವಿಹಾರಧಾಮದ ಅಧ್ಯಕ್ಷ ಎ.ಎನ್.ಮಹೇಶ್, ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ, ಸೇವಾದಳದ ಅಧ್ಯಕ್ಷ ಆನಂದ್,ಲ್ಪಸಂಖ್ಯಾತರ ವಿಬಾಗದ ನಿಸ್ಸಾರ್ ಅಹ್ಮದ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News