ಮೂಡಿಗೆರೆ ಬಿಜೆಪಿ ಕಚೇರಿಯಲ್ಲಿ: ಅಂಬೇಡ್ಕರ್ ಜಯಂತಿ
ಮೂಡಿಗೆರೆ, ಎ.15: ಜಾತಿ ಪದ್ಧತಿ ಹುಟ್ಟಿನಿಂದ ಬಂದಿದ್ದಲ್ಲ ಇವುಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮುನ್ನುಡಿ ಬರೆದಿದ್ದಾರೆ ಎಂದು ಬಿಜೆಪಿ ತಾಲೂಕು ಕಾರ್ಯದರ್ಶಿ ವಿನೋದ್ ಕಣಚೂರು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಅಂಬೇಡ್ಕರ್ ಸಾಮಾನ್ಯ ಜನರನ್ನು ಮೇಲೆತ್ತಲು ಇರುವ ವಹಾನ್ ಕೃತಿಯಾದ ಸಂವಿಧಾನವನ್ನು ಅಸಮಾನತೆ ನಿವಾರಣೆಗೆ ನಾಂದಿ ಹಾಡಲು ಕಾರಣ ಎಂದರು.
ಇದಕ್ಕೂ ಮುಂಚೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಪ್ರಮೋದ್ ದುಂಡಿಗ, ಕಾರ್ಯದರ್ಶಿ ಗಜೇಂದ್ರ ತರುವೆ, ವಕ್ತಾರ ನಯನ ತಳವಾರ, ಪ್ರಭಾಕರ್, ಹೋಬಳಿ ಅಧ್ಯಕ್ಷ ಸುನೀಲ್ ನಿಡಗೋಡು, ಸಂಜಯ್ ಕೊಟ್ಟಿಗೆಹಾರ, ಲಕ್ಷ್ಮಣಶೆಟ್ಟಿ, ಯುವಮೋರ್ಚ ಅಧ್ಯಕ್ಷ ಪ್ರವೀಣ್ ಪೂಜಾರಿ, ಎಸ್.ಇ ಮೋರ್ಚದ ಜಯಪಾಲ್, ಪ್ರಕಾಶ್ ಸೇರಿದಂತೆ ಅನೇಕ ಮತ್ತಿತರರು ಉಪಸ್ಥಿತರಿದ್ದರು