ವಿದ್ಯುತ್ ಲೈನ್‌ಗೆ ಬೋರ್‌ವೆಲ್ ಪೈಪ್ ತಗುಲಿ ಓರ್ವ ಮೃತ್ಯು
ಶಿವಮೊಗ್ಗ, ಎ.15: ಜಮೀನೊಂದರಲ್ಲಿ ಬೋರ್‌ವೆಲ್ ಪೈಪ್ ತೆಗೆಯುವ ವೇಳೆ ವಿದ್ಯುತ್ ತಂತಿಗೆ ಪೈಪ್ ತಗುಲಿದ ಪರಿಣಾಮ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಯುವಕನೋರ್ವ, ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ನಡೆದಿದೆ.
ಹೊನ್ನಾಳ್ಳಿ ತಾಲೂಕು ಅರಳಿಹಳ್ಳಿ ಗ್ರಾಮದ ನಿವಾಸಿ ಗಿರೀಶ್ (25) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಈ ಸಂಬಂಧ ಜಮೀನು ಮಾಲೀಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತನ ಕಡೆಯವರು ದೂರು ದಾಖಲಿಸಿದ್ದಾರೆ.ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏನಾಯ್ತು : ಹೊಳಲೂರಿನ ರೈತರೊಬ್ಬರ ಜಮೀನಿನಲ್ಲಿದ್ದ ಬೋರ್‌ವೆಲ್ ಮೋಟಾರ್ ದುರಸ್ತಿಯಾಗಿತ್ತು. ಇದರ ರಿಪೇರಿಗೆಂದು ಗಿರೀಶ್ ಆಗಮಿಸಿದ್ದರು. ಬೋರ್‌ವೆಲ್‌ಗೆ ಹಾಕಲಾಗಿದ್ದ ಕಬ್ಬಿಣದ ಪೈಪ್ ಮೇಲೆಕ್ಕೇತ್ತುವಾಗ ಸಮೀಪದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ಲೈನ್ ತಗುಲಿ ವಿದ್ಯುತ್ ಪ್ರವಹಿಸಿತ್ತು. ಪೈಪ್ ಹಿಡಿದುಕೊಂಡಿದ್ದ ಗಿರೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.