ಟ್ರ್ಯಾಕ್ಟರ್ ಮಗುಚಿ ಇಬ್ಬರಿಗೆ ಗಂಭೀರ ಗಾಯ
Update: 2017-04-15 21:21 IST
ಗುಂಡ್ಲುಪೇಟೆ,ಎ.15: ಟ್ರ್ಯಾಕ್ಟರ್ ಮಗುಚಿಬಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ತೆರಕಣಾಂಬಿ ಸಮೀಪದಲ್ಲಿ ನಡೆದಿದೆ.
ತಾಲೂಕಿನ ಕಗ್ಗಳದಹುಂಡಿ ಗ್ರಾಮದ ಅಮೀರ್ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‌ನಲ್ಲಿ ಕಲ್ಲುತುಂಬಿಸಿಕೊಂಡು ಕೊತ್ತಲವಾಡಿ ಗ್ರಾಮದಿಂದ ಕಗ್ಗಳ ಗ್ರಾಮದತ್ತ ತೆರಳುವಾಗ ಚಾಲಕನನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಪರಿಣಾಮವಾಗಿ ಚಾಲಕ ಗುಂಡು(35), ರಾಜೇಶ(30)ಎಂಬುವರಿಗೆ ತಲೆಗೆ ತೀವ್ರ ಪೆಟ್ಟುಬಿದ್ದಿದ್ದು ತೆರಕಣಾಂಬಿಯ ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.