ಕರ್ಣಾಟಕ ಬ್ಯಾಂಕಿನ ನೂತನ ಎಂಡಿ ಮತ್ತು ಸಿಇಒ ಆಗಿ ಮಹಾಬಲೇಶ್ವರ ಎಂ.ಎಸ್.ಅಧಿಕಾರ ಸ್ವೀಕಾರ
Update: 2017-04-15 21:53 IST
ಮಂಗಳೂರು,ಎ.15: ಕರ್ಣಾಟಕ ಬ್ಯಾಂಕಿನ ನೂತನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಮಹಾಬಲೇಶ್ವರ ಎಂ.ಎಸ್.ಅವರು ಶನಿವಾರ ನಗರದಲ್ಲಿರುವ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅವರ ಪೂರ್ವಾಧಿಕಾರಿ ಪಿ.ಜಯರಾಮ ಭಟ್ ಅವರು ಬ್ಯಾಂಕಿನ ಅಧ್ಯಕ್ಷ(ಅರೆ ಕಾಲಿಕ,ನಾನ್ ಎಕ್ಸಿಕ್ಯೂಟಿವ್)ರಾಗಿ ಈಗಾಗಲೇ ಅಧಿಕಾರ ವಹಿಸಿಕೊಂಡಿದ್ದಾರೆ.
ಮಹಾಬಲೇಶ್ವರ ಎಂ.ಎಸ್ ಅವರು ಮೂರು ವರ್ಷಗಳ ಅಧಿಕಾರಾವಧಿಯನ್ನು ಹೊಂದಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನನ್ನ ಪೂರ್ವಾಧಿಕಾರಿ ಪಿ.ಜಯರಾಮ ಭಟ್ ಅವರು ಬ್ಯಾಂಕಿನ ಸರ್ವಾಂಗೀಣ ಪ್ರಗತಿಗಾಗಿ ಆರಂಭಿಸಿದ ಉಪಕ್ರಮಗಳನ್ನು ಮುಂದಕ್ಕೊಯ್ಯುವುದು ನನ್ನ ಪ್ರಥಮ ಆದ್ಯತೆಯಾಗಿರುತ್ತದೆ ಎಂದು ಹೇಳಿದರು.
ಅಧಿಕಾರ ಸ್ವೀಕಾರಕ್ಕೆ ಮುನ್ನ ಮಹಾಬಲೇಶ್ವರ ಎಂ.ಎಸ್.ಅವರು ಬ್ಯಾಂಕಿನ ಅಧ್ಯಕ್ಷರು ಮತ್ತು ಇತರ ಅಧಿಕಾರಿಗಳೊಂದಿಗೆ ಸಂಸ್ಥಾಪಕರಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು.