×
Ad

ಮಂಗಳೂರು, ಗುಲ್ಬರ್ಗ, ಧಾರವಾಡ ಜಿಲ್ಲೆಯ ಎಟಿಎಂಗಳಲ್ಲಿ ದುಡ್ಡಿಲ್ಲ

Update: 2017-04-16 11:42 IST

ಬೆಂಗಳೂರು, ಎ.16: ಕಳೆದ ಐದು ತಿಂಗಳ ಹಿಂದೆ ನೋಟ್ ಬ್ಯಾನ್‌ ಪರಿಣಾಮವಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಜನರ ಸಮಸ್ಯೆ ಇನ್ನೂ ಪೂರ್ಣವಾಗಿ ಪರಿಹಾರಗೊಂಡಿಲ್ಲ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಬಹುತೇಕ  ಎಟಿಎಂಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಮಂಗಳೂರು, ಧಾರವಾಡ, ಗುಲ್ಬರ್ಗ ಜಿಲ್ಲಾ ಕೇಂದ್ರಗಳಲ್ಲಿರುವ ಬಹುತೇಕ ಎಟಿಎಂಗಳು ಖಾಲಿಯಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು  ಎಟಿಎಂಗಳಲ್ಲಿ ಹಣ ಖಾಲಿಯಾಗಿದ್ದು, ಇನ್ನೂ ಕೆಲವು ಎಟಿಎಂಗಳು ಹಾಳಾಗಿದೆ. ಔಟ್‌ ಆಫ್‌ ವಾರ್ಡರ್, ನೋ ಕ್ಯಾಷ್‌ ಎಂಬ ಫಲಕ‌ಗಳನ್ನು ಎಟಿಎಂ ಮುಂದೆ ತೂಗು ಹಾಕಿರುವುದನ್ನು ಕಾಣಬಹುದಾಗಿದೆ.
ಎಟಿಎಂಗಳಲ್ಲಿ  ಹಣದ ಕೃತಕ ಅಭಾವ ಕಾಣಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News