×
Ad

ಲಾರಿ-ಬೈಕ್ ಢಿಕ್ಕಿ: ಇಬ್ಬರಿಗೆ ಗಂಭೀರ ಗಾಯ

Update: 2017-04-16 16:00 IST

ಭಟ್ಕಳ, ಎ.16: ಲಾರಿ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ವೆಂಕಟಾಪುರ ಐಸ್ ಫ್ಯಾಕ್ಟರಿ ಬಳಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಹಾಡುವಳ್ಳಿಯ ಶ್ರೀಧರ್ ಸೋಮಯ್ಯ ಗೊಂಡ(27), ಕೃಷ್ಟ ಅಣ್ಣಪ್ಪ ಗೊಂಡಾ(28) ಎಂದು ಗುರುತಿಸಲಾಗಿದೆ. ಇವರು ಐಸ್ ಫ್ಯಾಕ್ಟರಿ ಬಳಿಯ ಮನೆಯೊಂದರ ಕೆಲಸ ಮುಗಿಸಿ ಹಾಡುವಳ್ಳಿಗೆ ಹೋಗುತ್ತಿರುವಾಗ ನಿಮಾರ್ಣ ಹಂತದಲ್ಲಿರುವ ನೂತನ ರಾ.ಹೆ.66ರಲ್ಲಿ ಮೀನು ಸಾಗಾಟ ಮಡುತ್ತಿದ್ದ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News