ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ: ಓರ್ವ ಮೃತ್ಯು
Update: 2017-04-16 18:47 IST
ಸೊರಬ, ಎ.16: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಶಿಗ್ಗಾ ಗ್ರಾಮದಲ್ಲಿ ನಡೆದಿದೆ.
ಶಿಗ್ಗಾ ಗ್ರಾಮದ ನಾಗರಾಜ್ (42) ಎಂಬವರೇ ಮೃತಪಟ್ಟಿರುವ ದುರ್ದೈವಿ. ಸೊರಬ ಹಾಗೂ ಶಿರಾಳಕೊಪ್ಪ ಸಂಪರ್ಕ ರಸ್ತೆಯಾಗಿರುವ ಶಿಗ್ಗಾ ಮುಖ್ಯ ರಸ್ತೆಯ ಶಿಗ್ಗಾದ ತೋಟದ ಕೆರೆ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.