​ಮಂಡ್ಯ: ಬಿರುಗಾಳಿಗೆ ನೆಲಕ್ಕುರುಳಿದ ಮರ, ಮೇಲ್ಛಾವಣಿಗಳು

Update: 2017-04-16 15:12 GMT

ಮಂಡ್ಯ, ಎ.16: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ರವಿವಾರ ತುಂತುರು ಮಳೆ ಸಮೇತ ಬೀಸಿದ ಬಿರುಗಾಳಿಗೆ ಮರಗಳು ನೆಲೆಕ್ಕುರಿಳಿದರೆ, ಮನೆ ಹಾಗೂ ಅಂಗಡಿ ಮೇಲ್ಛಾವಣಿಗಳು ಹಾರಿಹೋಗಿವೆ.

ಸಂಜೆ ಸಾಧಾರಣ ಮಳೆ ಸುರಿದಿದ್ದು, ಈ ಸಂದರ್ಭ ಬೀಸಿದ ಬಿರುಗಾಳಿ ಸಾರ್ವಜನಿಕರನ್ನು ಸ್ವಲ್ಪ ಸಮಯ ಆತಂಕಕ್ಕೆ ಸಿಲುಕಿಸಿತು. ಆದರೆ ಯಾವುದೇ ಸಾವು-ನೋವು ವರದಿಯಾಗಿಲ್ಲ. ನಗರದ ಹೊರವಲಯದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕ ಮರ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತ್ಯವ್ಯಸ್ತಗೊಂಡಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

ಅಶೋಕ ನಗರದಲ್ಲಿ ಮರ ಉರುಳಿಬಿದ್ದಿದ್ದರೆ, ಮಹಿಳಾ ಸರಕಾರಿ ಕಾಲೇಜಿನ ರಸ್ತೆಯಲ್ಲಿ ಮೂರು ಮರಗಳ ರೆಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು. ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಬಸವರಾಜು ಎಂಬುವರ ಮಾವಿನ ಮರ ಉರುಳಿ ಫಸಲು ನೆಲಕಚ್ಚಿದ್ದರೆ, ಇನ್ನೂ ಹಲವಾರು ರೈತರ ತೆಂಗು, ಇತರೆ ಮರಗಳು, ಬಾಳೆತೋಟಗಳು ಗಾಳಿಗೆ ಉರುಳಿ ಅಪಾರ ನಷ್ಟವಾಗಿದೆ.

ಮಂಡ್ಯದ ರೈಲ್ವೆ ನಿಲ್ದಾಣದ ಪ್ರಯಾಣಿಕರ ತಂಗುದಾಣದ ಮೇಲ್ಛಾವಣಿಗಳು ಹಾರಿದ್ದು, ನಗರದ ಅಂಗಡಿ, ಹೊಟೇಲ್, ಕಚೇರಿ ಎದುರಿದ್ದ ನಾಮಫಲಕಗಳು ಗಾಳಿಗೆ ಹಾರಿಹೋದವು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News