ಇಟ್ಟಿಗೆಯಿಂದ ಹೊಡೆದು ತಾಯಿಯನ್ನೇ ಕೊಂದ ಪುತ್ರ
Update: 2017-04-16 21:44 IST
ಸಕಲೇಶಪುರ, ಎ.16: ಮಗನೊಬ್ಬ ತಾಯಿಯನ್ನೇ ಕೊಲೆಮಾಡಿರುವ ಘಟನೆ ಪಟ್ಟಣದ ಚಂಪಕನಗರ ಬಡಾವಣೆಯಲ್ಲಿ ರವಿವಾರ ರಾತ್ರಿ ನಡೆದಿದೆ. ಆರೋಪಿ ಉಮೇಶ (28) ಎಂಬಾತ ತನ್ನ ತಾಯಿ ತಂಗವ್ವ (55)ರನ್ನು ಇಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ತಂದೆ ಬೆಂಕಿ ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಮಗ ಉಮೇಶನಿಗೆ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಡಿ ದರ್ಚೆಯ ನೌಕರಿ ದೊರಕಿತ್ತು. ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರಿಂದ ಕೆಲಸದಿಂದ ಅಮಾನತುಗೊಂಡಿದ್ದ ಉಮೇಶ ಮನೆಯಲ್ಲೇ ಇದ್ದ. ದಿನನಿತ್ಯ ತಾಯಿ ಮಗನ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದ್ದು, ರವಿವಾರ ರಾತ್ರಿ 9 ಗಂಟೆಯ ಸುಮಾರಿಗೆ ಉಮೇಶ ತಾಯಿಯನ್ನು ಕೊಲೆ ಮಾಡಿದ್ದಾನೆ.
ಆರೋಪಿ ಉಮೇಶನನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.