ದೃಢವಿಶ್ವಾಸ, ನಂಬಿಕೆಯಿದ್ದರೆ ಜೀವನ ಸಾರ್ಥಕ: ಆಲ್ಬರ್ಟ್ ಡಿಸಿಲ್ವ
Update: 2017-04-16 22:37 IST
ಮೂಡಿಗೆರೆ, ಎ.16: ಪ್ರತಿಯೊಬ್ಬರು ದೃಢ ವಿಶ್ವಾಸ, ನಂಬಿಕೆ, ಪ್ರೀತಿ, ತ್ಯಾಗ ಅಳವಡಿಸಿದರೆ ಜೀವನದ ಸಾರ್ಥಕತೆಯ ಬದುಕಿಗೆ ನಾಂದಿಯಾಗಲಿದೆ ಎಂದು ಬಣಕಲ್ ಬಾಲಿಕಾ ಮರಿಯ ಚರ್ಚ್‌ನ ಧರ್ಮಗುರು ಫಾ.ಆಲ್ಬರ್ಟ್ ಡಿಸಿಲ್ವ ಅಭಿಪ್ರಾಯಪಟ್ಟರು.
ಬಣಕಲ್ ಬಾಲಿಕಾ ಮರಿಯ ಚರ್ಚ್‌ನಲ್ಲಿ ಪಾಸ್ಖ ಹಬ್ಬದ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಪ್ರತಿಯೋರ್ವ ವ್ಯಕ್ತಿ ಏನೂ ಇಲ್ಲದೇ ಒಂದು ತಿಂಗಳು ಬದುಕಬಹುದು. ಆದರೆ ಗಾಳಿ ಇಲ್ಲದಿದ್ದರೆ ಒಂದು ನಿಮಿಷವೂ ಬದುಕಲು ಸಾಧ್ಯವಿಲ್ಲ. ಹಾಗೆಯೇ ಕ್ರಿಸ್ತರು ತೋರಿಸಿದ ಪ್ರೀತಿ, ತ್ಯಾಗ, ನಂಬಿಕೆಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಬದುಕಿದ್ದರೂ ಸತ್ತಂತೆ ಎಂದರು.
ವಿಮುಕ್ತಿ ಸಂಸ್ಥೆಯ ಮುಖ್ಯಸ್ಥ ಫಾ. ವಿನ್ಸೆಂಟ್ ಡಿಸೋಜ ಮಾತನಾಡಿದರು. ಪೂಜೆಯಲ್ಲಿ ಬ್ರದರ್ ಪ್ರದೀಪ್, ಫಾದರ್ ಚಾರ್ಲ್ಸ್ ಸಲ್ದಾನ ಹಾಜರಿದ್ದರು.