×
Ad

ಅಪಘಾತ: ಇಬ್ಬರ ಸಾವು ಸಾವಿಗೆ ಕಾರಣವಾದ ಹಂಪ್ಸ್ ತೆರವು

Update: 2017-04-16 23:06 IST

ಶಿವಮೊಗ್ಗ, ಎ. 16: ವೈಜ್ಞ್ಞಾನಿಕವಾಗಿ ಹಾಕಲಾಗಿದ್ದ ಹಂಪ್ಸ್ (ರಸ್ತೆ ಉಬ್ಬು) ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಪೊಲೀಸ್ ಭದ್ರತೆಯಲ್ಲಿ ಲೋಕೋಪಯೋಗಿ ಇಲಾಖೆಯು ರಸ್ತೆಯಲ್ಲಿ ಹಾಕಿದ್ದ ಹಂಪ್ಸ್ ತೆರವುಗೊಳಿಸಿದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಘಟನೆ ಹಿನ್ನೆಲೆ: ಅರೆಬಿಳಚಿ ಕ್ಯಾಂಪ್ ಬಳಿಯ ಚೆನ್ನಗಿರಿ ರಸ್ತೆಯಲ್ಲಿ ವಾಹನಗಳ ವೇಗದ ನಿಯಂತ್ರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ವೈಜ್ಞ್ಞಾನಿಕ ಹಂಪ್ಸ್ ಹಾಕಲಾಗಿದ್ದು, ಶನಿವಾರ ಈ ಹಂಪ್್ಸ ಬಳಿ ನಿಧಾನವಾಗಿ ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಆಗಮಿಸಿದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಯಡೇಹಳ್ಳಿ ಗ್ರಾಮದ ಮಲ್ಲಿಕಾರ್ಜುನಪ್ಪ(45) ಹಾಗೂ ಶಶಿಧರ(43) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಲಾರಿ ಚಾಲಕ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆಕ್ಷೇಪ: ವೈಜ್ಞಾನಿಕವಾಗಿ ಅಳವಡಿಕೆ ಮಾಡಲಾಗಿದ್ದ ಹಂಪ್ಸ್ ಬೈಕ್ ಸವಾರರ ಪಾಲಿಗೆ ಮೃತ್ಯುಪಾಶವಾಗಿದ್ದನ್ನು ಮನಗಂಡ ಲೋಕೋಪಯೋಗಿ ಇಲಾಖೆಯು ಜೆಸಿಬಿಯ ಮೂಲಕ ತೆರವುಗೊಳಿಸಲು ಮುಂದಾಯಿತು. ಈ ವೇಳೆ ಹಂಪ್ಸ್ ತೆರವುಗೊಳಿಸಲು ಸ್ಥಳೀಯ ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಮತ್ತೆ ಕೆಲವರು ಹಂಪ್ಸ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಇದರಿಂದ ಸ್ಥಳದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News