×
Ad

ಭೂಮಿಯಿಂದ ಹೊರಬಂದ ಬೆಂಕಿ: ಬಾಲಕ ಮೃತ್ಯು

Update: 2017-04-16 23:57 IST

ಮೈಸೂರು, ಎ.16: ಭೂಮಿಯಿಂದ ಹೊರಬರುತ್ತಿದ್ದ ನಿಗೂಢ ಬೆಂಕಿಯ ಕೆನ್ನಾಲಿಗೆಗೆ ಬಾಲಕನೊಬ್ಬ ಬಲಿಯಾದ ಘಟನೆ ನಗರದ ಹೊರವಲಯದಲ್ಲಿರುವ ಕುಂಬಾರ ಕೊಪ್ಪಲು ನಿವಾಸಿ ಸೋಮಣ್ಣ ಎಂಬವರಿಗೆ ಸೇರಿದ ಜಮೀನಿನಲ್ಲಿ ನಡೆದಿದೆ.

ಹರ್ಷಲ್ ಮೃತಪಟ್ಟ ಬಾಲಕ. ಹರ್ಷಲ್ ಬಹಿರ್ದಸೆಗೆ ತೆರಳಿದ್ದಾಗ ತನಗರಿವಿಲ್ಲದೇ ಬೆಂಕಿ ಉಗುಳುತ್ತಿದ್ದ ಬೆಂಕಿಯ ಕುಂಡಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು. ಬಳಿಕ ಹರ್ಷಲ್‌ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರ್ಷಲ್ ಮೃತಪಟ್ಟಿದ್ದಾನೆ. ಹರ್ಷಲ್ ಕ್ಯಾದನಹಳ್ಳಿಯ ಮೂರ್ತಿ ಹಾಗೂ ಜಾನಕಿ ಎಂಬವರ ಪುತ್ರ.

ಘಟನಾ ಸ್ಥಳಕ್ಕೆ ತೆರಳಿದ ಮೇಟಗಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಗೂಢ ಬೆಂಕಿ ಹೊರಬರುತ್ತಿದ್ದದನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ. ಆಸುಪಾಸಿನಲ್ಲಿರುವ ಕಾರ್ಖಾನೆಯಿಂದ ರಾಸಾಯನಿಕ ಪದಾರ್ಥಗಳನ್ನು ತಂದು ಸುರಿದಿರುವ ಕಾರಣದಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News