ಓ ಮೆಣಸೇ ...

Update: 2017-04-16 18:51 GMT

 ಜನರಿಗಾಗಿ ಸ್ಥಾನಮಾನ ಬಿಟ್ಟು ಜೆಡಿಎಸ್‌ನಲ್ಲಿದ್ದೇವೆ 

-ಝಮೀರ್ ಅಹ್ಮದ್, ಮಾಜಿ ಸಚಿವ
     
ಸ್ಥಾನದ ವಿಷಯ ಗೊತ್ತಿಲ್ಲ. ಮಾನ ಬಿಟ್ಟಿರುವುದಂತೂ ಹೌದು.

---------------------

ಹಿಂಸೆಯಿಂದ ಯಾವ ಕಾರ್ಯವೂ ಯಶಸ್ವಿಯಾಗುವುದಿಲ್ಲ

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
     
ಭಾರತದ ವೈಫಲ್ಯದಲ್ಲಿ ನಿಮ್ಮ ಪಾತ್ರ ಇದೆಯೆಂದು ಒಪ್ಪಿಕೊಂಡಂತಾಯಿತು.

---------------------

 ನನ್ನ ಮಕ್ಕಳು ಬಡತನದಲ್ಲಿ ಸಾಯುವುದು ನನಗಿಷ್ಟವಿಲ್ಲ

-ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಅಧ್ಯಕ್ಷ

ಬೇರೆಯವರ ಮಕ್ಕಳು ಸತ್ತರೆ ಪರವಾಗಿಲ್ಲವೇ?
---------------------

ಕಂಬಳ ಮಸೂದೆಯನ್ನು ರೂಪಿಸಿರುವ ಕರ್ನಾಟಕ ಸರಕಾರವನ್ನು ಅಭಿನಂದಿಸುತ್ತೇನೆ

-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಮತದಾರರ ಬೆನ್ನಿಗೇ ಕೋಣಗಳ ನೊಗ.
---------------------

ಸಿದ್ದರಾಮಯ್ಯ ಸರಕಾರದಲ್ಲಿ ಸಾಮಾನ್ಯ ಜನರಿಗೆ ಭದ್ರತೆ ಇಲ್ಲ

-ನಳಿನ್‌ಕುಮಾರ್ ಕಟೀಲು, ಸಂಸದ
 ಭದ್ರತೆ ಸಿಗಬೇಕಾದರೆ ಬೆಂಕಿ ಹಚ್ಚುವ ಜನಪ್ರತಿನಿಧಿಗಳು ಜೈಲೊಳಗಿರಬೇಕು.

---------------------

ಬಾಂಗ್ಲಾವನ್ನು ಭಾರತಕ್ಕೆ ಮಾರಾಟ ಮಾಡಲು ಬಾಂಗ್ಲಾ ಪ್ರಧಾನಿ ಮುಂದಾಗಿದ್ದಾರೆ

-ಖಾಲಿದಾ ಝಿಯಾ, ಬಾಂಗ್ಲಾ ಪ್ರತಿಪಕ್ಷದ ನಾಯಕಿ

ಆದರೆ ಹಳೆಯ ಒಂದು ಸಾವಿರ ರೂ. ನೋಟುಗಳನ್ನು ತೆಗೆದುಕೊಳ್ಳುವುದಾದರೆ ಬಾಂಗ್ಲಾವನ್ನು ಕೊಳ್ಳುವುದಕ್ಕೆ ಭಾರತ ಸಿದ್ಧವಂತೆ.

---------------------
         
ನನಗೆ ಈಗ ರಾಜಕೀಯದ ಗೀಳು ಇಲ್ಲ

-ಗೋಪಾಲ ಪೂಜಾರಿ, ಶಾಸಕ

ಗೀಳುರೋಗಕ್ಕೆ ಮದ್ದು ತೆಗೆದುಕೊಂಡಿರಬೇಕು.

---------------------

 ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ರಾಜ್ಯವನ್ನು ಹಾಳುಗೆಡವಿ ಲೂಟಿ ಮಾಡಿವೆ

- ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ

ಅದಕ್ಕಾಗಿ ನಿಮಗೂ ಲೂಟಿ ಮಾಡಲು ಅವಕಾಶ ಕೊಡಬೇಕೇ?

---------------------
ಸಮಾಜ ಸೇವೆಯಲ್ಲಿ ನಿವೃತ್ತಿ ಎಂಬುದಿಲ್ಲ

-ಅಭಯಚಂದ್ರ ಜೈನ್, ಶಾಸಕ

ರಾಜಕೀಯ ನಿವೃತ್ತಿಯ ಬಳಿಕ ಕೆಲವರಿಗೆ ಸಮಾಜ ಸೇವೆಯ ನೆನಪಾಗುತ್ತದೆ.

---------------------
ರೈಲ್ವೆ ಇಲಾಖೆ ದೀರ್ಘಕಾಲದಿಂದ ಕ್ರಿಸ್‌ಮಸ್ ತಾತನಿಗಾಗಿ ಕಾಯುತ್ತಿದೆ

- ಸುರೇಶ್ ಪ್ರಭು, ರೈಲ್ವೆ ಸಚಿವ
 ರೈಲ್ವೆ ಇಲಾಖೆಯನ್ನು ಯಾರಿಗೆ ಉಡುಗೊರೆ ಕೊಡಬೇಕೆಂದಿದ್ದೀರಿ?
---------------------

ಹಿಂದೂಗಳನ್ನು ನೋಡಿ ಮುಸ್ಲಿಮರು ಕಲಿಯಬೇಕು

-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ಅಲ್ಲಿ ಕಲಿಯುವುದು ಏನೂ ಇಲ್ಲ, ಬರೇ ತುಳಿಯುವುದು ಎನ್ನುವುದು ಅರಿವಾಗಿಯೇ ತಲೆಮಾರುಗಳ ಹಿಂದೆಯೇ ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದರು.
---------------------
ಯಾವುದೇ ಕಾರಣಕ್ಕೂ ಸಮಾಜಘಾತುಕ ಶಕ್ತಿಗಳನ್ನು ಸಹಿಸುವುದಿಲ್ಲ

- ಯು.ಟಿ.ಖಾದರ್, ಸಚಿವ

ಉಳ್ಳಾಲದಲ್ಲಿ ತಾವು ಸಾಕುತ್ತಿರುವ ಶಕ್ತಿಗಳಿಗೂ ಇದು ಅನ್ವಯಿಸುತ್ತದೆಯೇ?
---------------------
ಜಿಲ್ಲೆಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ

- ರಘುಪತಿ ಭಟ್, ಮಾಜಿ ಶಾಸಕ
   
ಹೌದು ಎಂದಿತು ಪದ್ಮಪ್ರಿಯಾ ಆತ್ಮ.

---------------------
ಚುನಾವಣಾ ಆಯೋಗ ಕೂಡಾ ಧೃತರಾಷ್ಟ್ರನಂತೆ ವರ್ತಿಸುತ್ತಿದೆ

- ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
     ಉತ್ತರ ಪ್ರದೇಶದಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಪಾಂಡವರೇಕೆ ಸುಮ್ಮಗಿದ್ದರು?
---------------------

ತ್ರಿವಳಿ ತಲಾಖ್ ಪಾಕಿಸ್ತಾನದಲ್ಲಿಯೇ ಚಾಲ್ತಿಯಲ್ಲಿಲ್ಲ

- ಆರ್.ಕೆ. ಸಿಂಗ್, ಬಿಜೆಪಿ ನಾಯಕ

ಪಾಕಿಸ್ತಾನ ಭಾರತಕ್ಕೆ ಮಾದರಿಯೇ?
---------------------

ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು

-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ 

ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಒಗ್ಗೂಡಬೇಕೇ?
---------------------

ಕಾಂಗ್ರೆಸ್ ತೇರು ಇದ್ದ ಹಾಗೆ, ಇದನ್ನು ಯಾರು ಬೇಕಾದರೂ ಬಂದು ಎಳೆಯಬಹುದು

-ಸಿ.ಎಂ.ಇಬ್ರಾಹೀಂ, ಯೋಜನಾ ಆಯೋಗದ ಉಪಾಧ್ಯಕ್ಷ

ಹಾಗೆಂದು ಎಲ್ಲರೂ ಅದನ್ನು ಪ್ರಪಾತದ ಕಡೆಗೆ ಎಳೆದೊಯ್ಯುವುದೇ?
---------------------

ಬಿಜೆಪಿ ಸಿದ್ಧಾಂತಕ್ಕೂ ನನ್ನ ಸಿದ್ಧಾಂತಕ್ಕೂ ಹೊಂದಾಣಿಕೆ ಆಗದ ಕಾರಣ ನಾನು ಬಿಜೆಪಿ ಸೇರುವುದಿಲ್ಲ

-ಶಶಿ ತರೂರು, ಸಂಸದ
  ತಮ್ಮ ಪತ್ನಿಯ ನಿಗೂಢ ಸಾವು ಮತ್ತೆ ಮೇಲೆದ್ದು ಬರಬಹುದು. ಹುಷಾರ್.

---------------------
ಸಿದ್ದರಾಮಯ್ಯ ಬಳಸುವ ಭಾಷೆ ರಾಜ್ಯದ ಜನರಿಗೆ ಬೇಸರ ತಂದಿದೆ

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಅದಕ್ಕಾಗಿ ತಮ್ಮ ಭಾಷೆಯನ್ನು ಬಳಕೆ ಮಾಡಬೇಕು ಎಂದು ಕರೆ ನೀಡುತ್ತಿದ್ದೀರಾ?
---------------------

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಬಲಗೊಳ್ಳಬೇಕು

- ಎಲ್.ಕೆ.ಅಡ್ವಾಣಿ, ಬಿಜೆಪಿ ಮುಖಂಡ
     
ಮೊದಲು ನಿಮ್ಮ ಮತ್ತು ಬಿಜೆಪಿ ಸಂಬಂಧವನ್ನು ಬಲಗೊಳಿಸಿ.

---------------------
ಓಲ್ಡ್ಡ್ ಈಸ್ ಗೋಲ್ಡ್ದ್ ಎಂಬಂತೆ ಹಿಂದಿನ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನೇ ಪುನಃ ಅಳವಡಿಸಿಕೊಳ್ಳೋಣ

- ಮಮತಾ ಬ್ಯಾನರ್ಜಿ, ಪ.ಬಂಗಾಳ ಮುಖ್ಯಮಂತ್ರಿ
ಪಶ್ಚಿಮ ಬಂಗಾಳದಲ್ಲಿ ಮತ್ತೆ ಕಮ್ಯುನಿಸ್ಟ್ ಸರಕಾರ ಬರಬೇಕು ಎಂದು ಬಯಸುತ್ತೀರಾ?
---------------------

ನಾನು ಯಾವ ಸ್ಥಾನದಲ್ಲಿರಬೇಕು ಎಂಬುದನ್ನು ಹೈ ಕಮಾಂಡ್ ನಿರ್ಧರಿಸುತ್ತದೆ

- ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ನೀವು ಯಾವ ಸ್ಥಾನದಲ್ಲಿದ್ದರೂ ದಲಿತರಿಗೆ ಸಿಕ್ಕುವುದು ಅಷ್ಟರಲ್ಲೇ ಇದೆ.

---------------------
ಪುರುಷರು ಮಹಿಳೆಯರ ರೆಕ್ಕೆಗಳನ್ನು ಕತ್ತರಿಸಬಾರದು , ಅವರಿಗೆ ಹಾರಲು ಅವಕಾಶ ಮಾಡಿಕೊಡಬೇಕು

-ಯೂಸುಫ್ ಮಲಾಲಾ
ಹಾರಿ, ಅಮೆರಿಕದ ಪಂಜರದೊಳಗೆ ಗಿಳಿಯಂತೆ ಮುದ್ದಾಗಿ ಮಾತನಾಡುವವರ ಕುರಿತಂತೆಯೂ ಕನಿಕರವಿದೆ.

---------------------
ನರೇಂದ್ರ ಮೋದಿ ಹಿರಿಯಣ್ಣನಿದ್ದಂತೆ

- ಉದ್ಧವ್ ಠಾಕ್ರೆ, ಶಿವಸೇನೆ ಮುಖ್ಯಸ್ಥ
ಅವರು ದುರ್ಯೋಧನ, ತಾವು ದುಶ್ಶಾಸನ. ಸದ್ಯಕ್ಕೆ ಮಹಾರಾಷ್ಟ್ರದ ವಸ್ತ್ರಾಪಹರಣ.

---------------------
ಪಾಕ್ ಪ್ರಧಾನಿ ನವಾಝ್ ಶರೀಫ್ ತಮ್ಮ ದೇಶದಲ್ಲಿಯೇ ನಗೆಪಾಟಲಿಗೆ ಈಡಾಗುತ್ತಿದ್ದಾರೆ

- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ನೀವು ಭಾರತೀಯರನ್ನು ನಗಿಸುತ್ತಿರುವುದೇನು ಕಡಿಮೆಯೇ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...