×
Ad

ಬೆಂಕಿ ಉಗುಳುವ ಭೂಮಿಗೆ ಕಾಲಿಟ್ಟ ಕೂಲಿ ಕಾರ್ಮಿಕನಿಗೆ ಗಾಯ

Update: 2017-04-17 13:54 IST

ಮೈಸೂರು,ಎ.17:ಮೈಸೂರು ಹೊರ ವಲಯದಲ್ಲಿರುವ ಶ್ಯಾದನಹಳ್ಳಿಯಲ್ಲಿ ಭೂಮಿಯಲ್ಲಿ ಕಾಣಿಸಿಕೊಂಡ  ಬೆಂಕಿಯಿಂದ  ಕೂಲಿ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಸೋಮವಾರ ಕೂಲಿ ಕಾರ್ಮಿಕ ಮಂಜುನಾಥ ಎಂಬವರು ಆಕಸ್ಮಿಕವಾಗಿ ಬೆಂಕಿಗೆ ಬಿದ್ದು ಸುಟ್ಟ ಗಾಯಗಳೊಂದಿಗೆ ನಗರದ ಕೆ.ಆರ್ . ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಬಹಿರ್ದೆಸೆಗೆ ತೆರಳಿದ್ದ ಸಂದರ್ಭದಲ್ಲಿ ಕುದಿಯುತ್ತಿದ್ದ ಭೂಮಿಗೆ ಕಾಲಿಟ್ಟ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಹರ್ಷಲ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದನು.ಮತ್ತೋರ್ವ ಬಾಲಕ ಶೇ.75ರಷ್ಚು ಸುಟ್ಟಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. 
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News