×
Ad

​ಭಟ್ಕಳ: ಕಾಲೇಜ್ ರಸ್ತೆಯಲ್ಲಿ ಬೆಂಕಿ ಅವಘಡ

Update: 2017-04-17 18:21 IST

ಭಟ್ಕಳ, ಎ.17: ಇಲ್ಲಿನ ಅಂಜುಮನ್ ಕಾಲೇಜು ರಸ್ತೆಯಲ್ಲಿರುವ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳದ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಅಂಜುಮನ್ ಪದವಿ ಮಹಾವಿದ್ಯಾಲಯಕ್ಕೆ ಹೋಗುವ ಮಾರ್ಗದಲ್ಲಿ ಸೋಮವಾರ ಭಾರೀ ಬೆಂಕಿಯ ಕೆನ್ನಾಲಗೆ ಕಾಣಿಸಿಕೊಂಡಿದ್ದು, ಇದರಿಂದಾಗಿ ನಿವಾಸಿಗಳಲ್ಲಿ ಆತಂಕ ಮೂಡಿತ್ತು. ಬೇಸಿಗೆಯ ಉರಿ ಬಿಸಿಲಿನಲ್ಲಿ ಬೆಂಕಿಯ ಜ್ವಾಲೆಗಳು ಸುತ್ತಮುತ್ತ ಇರುವ ವಸತಿ ಪ್ರದೇಶಕ್ಕೆ ಹರಡಿಕೊಳ್ಳುವ ಮೊದಲು ಅಗ್ನಿಶಾಮಕದಳದವರು ಎಚ್ಚೆತ್ತು ಸಮಯಪ್ರಜ್ಞೆ ಪಾಲಿಸಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಬೀಡಿ ಅಥವಾ ಸಿಗರೇಟ್ ಸೇದಿ ಪಕ್ಕಕ್ಕೆ ಎಸೆದು ಹೋದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕಾಲೇಜು ರಸ್ತೆಯು ರಾ.ಹೆ. ಗೆ ಹೊಂದಿಕೊಂಡಿದ್ದರಿಂದ ಬೆಂಕಿಯಿಂದಾಗಿ ದಟ್ಟವಾದ ಹೊಗೆಯು ಹೆದ್ದಾರಿ ತುಂಬಾ ಆವರಿಸಿಕೊಂಡಿದ್ದು ಪ್ರಯಾಣಿಕರೂ ಇದರಿಂದ ತೊಂದರೆ ಅನುಭವಿಸುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News