×
Ad

ಐವರು ಹೆದ್ದಾರಿ ದರೋಡೆಕೋರರ ಬಂಧನ

Update: 2017-04-17 19:20 IST

ತುಮಕೂರು.ಎ.17: ಹೆದ್ದಾರಿಯಲ್ಲಿ ಹೊಂಚು ಹಾಕಿ ವಾಹನ ತಡೆದು ಮಾರಕಾಸ್ತ್ರಗಳಿಂದ ಹೆದರಿಸಿ ಹಣ, ಚಿನ್ನಾಭರಣ ಮತ್ತಿತರರ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐವರನ್ನು ಅಮೃತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಾ. 21 ರಂದು ರಾತ್ರಿ 11 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 75(ಬೆಂಗಳೂರು-ಹಾಸನ-ಮಂಗಳೂರು)ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಗ್ರಹಾರ ಗೇಟ್ ಬಳಿ ಹಾಸನದ ವಿಜಯಬ್ಯಾಂಕ್ ಮ್ಯಾನೇಜರ್ ಪೆಚಿಟ ಬೋಯಿನಾ ಸತ್ಯನಾರಾಯಣಮೂರ್ತಿ ತಮ್ಮ ಸ್ಕೋಡಾ ಕಾರಿನಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ತೆರಳುತಿದ್ದ ವೇಳೆ ಕಾರನ್ನು ಅಡ್ಡಹಾಕಿದ ಆರು ಜನರ ತಂಡ ಕಾರು,ನಗದು,ಎಟಿಎಂ ಕಾರ್ಡು,ಕ್ರೆಡಿಟ್ ಕಾರ್ಡು,ಗಿಫ್ಟ್ ಕಾರ್ಡು ಹಾಗೂ ಸ್ಯಾಮ್ ಸಂಗ್ ಮೊಬೈಲ್ ಕಿತ್ತುಕೊಂಡಿದಲ್ಲದೆ, ಹೆದರಿಸಿ ಎಟಿಎಂ ಪಾಸ್‌ವರ್ಡ್ ಪಡೆದು ಹಲವು ಎಟಿಎಂಗಳಲ್ಲಿ ಹಣ ಪಡೆಯಲು ಪ್ರಯತ್ನಿಸಿ ವಿಫಲವಾದ ಹಿನ್ನೆಲೆಯಲ್ಲಿ ಬೆಳಗ್ಗೆ 5.30ರ ಸುಮಾರಿಗೆ ಮಾರ್ಕೋನಹಳ್ಳಿ ಜಲಾಶಚಿುದ ಪ್ರದೇಶದಲ್ಲಿ ಸತ್ಯನಾರಾಯಣಮೂರ್ತಿಯನ್ನು ಕಾರಿನಿಂದ ದಬ್ಬಿ ಪರಾರಿಯಾಗಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಚಿತ್ ಅವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.ತಂಡವೂ ನಾಗಮಂಗಲ ತಾಲೂಕಿನ ಸುರೇಶ್‌ಚಂದ್ರ(34),ಬೆಂಗಳೂರಿನ ಶ್ರೀರಾಮಪುರದ ಮುರುಗೇಶ್(35), ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಪ್ರದೀಪ್(29), ಹಾಸನದ ಚೇತನ್(22),ಸಚಿನ್ (21) ಅವರುಗಳನ್ನು ಬಂಧಿಸಿ ಸತ್ಯನಾರಾಯಣಮೂರ್ತಿ ಅವರಿಂದ ಕಿತ್ತುಕೊಂಡಿದ್ದ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News