×
Ad

ಕಸ್ತೂರಿರಂಗನ್ ವರದಿ ಪರಿಷ್ಕರಿಸಿ ಜಾರಿಗೊಳಿಸಬೇಕು; ಬಿ.ರುದ್ರಯ್ಯ ಒತ್ತಾಯ

Update: 2017-04-17 19:37 IST

ಮೂಡಿಗೆರೆ, ಎ.17: ಕಸ್ತೂರಿರಂಗನ್ ವರದಿ ಜಾರಿಗೊಳಿಸಬಾರದೆಂಬ ಕೂಗಿನಲ್ಲಿ ಮಾಫಿಯಾಗಳ ರಾಜಕೀಯ ಷಡ್ಯಂತರವಿದೆ. ವರದಿಯ ಕೆಲ ಅಂಶಗಳನ್ನು ಕೇಂದ್ರ ಸರಕಾರ ಪರಿಷ್ಕರಿಸಿ ಜಾರಿಗೊಳಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು.

ಸೋಮವಾರ ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟ ಪ್ರದೇಶ ಅಪಾಯಕ್ಕೆ ಸಿಲುಕುತ್ತಿದೆ. ಟಿಂಬರ್, ಭೂ ಮಾಫಿಯ, ಕಲ್ಲುಕೋರೆ, ಮರಳು, ಬಂಡುಕೋರ ಮಾಫಿಯಾಗಳಿಂದಾಗಿ ಬರ ಪರಿಸ್ಥಿತಿ ಉಂಟಾಗಿದೆ. ನದಿ ತೊರೆಗಳು ನೀರಿಲ್ಲದೇ ಬತ್ತಿ ಹೋಗುತ್ತಿದೆ.ಈ ಮಾಫಿಯಾಗಳ ಲಾಭಿಯಿಂದ ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸದಂತೆ ರಾಜಕೀಯ ಷಡ್ಯಂತರ ನಡೆಯುತ್ತಿದೆ. ವರದಿಯ ಕೆಲ ಅಂಶಗಳನ್ನು ಪರಿಷ್ಕರಿಸಿ ಜಾರಿಗೊಳಿಸಿದರೆ  ಅರಣ್ಯವನ್ನು ಉಳಿಸಬಹುದು ಎಂದು ಹೇಳಿದರು.

ಪ್ರತೀ ಆದಿವಾಸಿ ಕುಟುಂಬಕ್ಕೆ ಸರಕಾರ ಎರಡು ಹಸು ನೀಡಿ,ಗೋಬರ್ ಗ್ಯಾಸ್ ಮೂಲಕ ಅಡುಗೆ ಮಾಡುವಂತೆ ತರಬೇತಿ ನೀಡಬೇಕುಂದು ತಿಳಿಸಿದರು.

ಯುಪಿಎ ಸರಕಾರ ಇದ್ದಾಗ ಮಾದವ ಗಾಡ್ಗಿಲ್ ವರದಿಯನ್ನು ತಿರಸ್ಕರಿಸಿ ಕಸ್ತೂರಿ ರಂಗನ್ ಸಮಿತಿ ನೇಮಿಸಿತು. ಅದರ ವರದಿ ಕೇಂದ್ರದ ಅಂಗಳದಲ್ಲಿದ್ದರೂ ಜಾರಿಗೊಳಿಸಲು ರಾಜಕೀಯ ವ್ಯವಸ್ಥೆ ಬಿಡುತ್ತಿಲ್ಲ. ಜನ ಜಾನುವಾರುಗಳಿಗೆ ತೊಂದರೆಯಾಗುವಂತೆ ವರದಿಯನ್ನು ಪರಿಷ್ಕರಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕಾರ್ಯದರ್ಶಿ ವಿಜಯ, ಘಟಕ ಕಾರ್ಯದರ್ಶಿ ಸಂತೋಷ್, ಮುಖಂಡ ಕೆಂಚಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News