ಡಾ.ಬಿ.ಆರ್.ಅಂಬೇಡ್ಕರರ 126ನೇ ವಿಶ್ವ ಜ್ಞಾನ ಉದಯ ದಿವಸ್

Update: 2017-04-17 15:21 GMT

ಮಾಲೂರು, ಎ.17: ಗ್ರಾಮೀಣ ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಆದರ್ಶಗಳು, ಅವರ ಚಿಂತನೆಗಳ ಬಗ್ಗೆ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಅರಿವು ಜಾಗೃತಿ ಮೂಡಿಸುವ ಮುಖಾಂತರ ಜಯಂತೋತ್ಸವನ್ನು ಆಚರಣೆ ಮಾಡುವುದು ಒಳಿತು ಎಂದು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಅಶ್ವಥನಾರಾಯಣ ಹೇಳಿದರು.

ತಾಲೂಕಿನ ಯರ್ರಪಶೆಟ್ಟಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ 126ನೇ ವಿಶ್ವ ಜ್ಞಾನ ಉದಯ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲ ಜಾಗೃತಿ ಸಮಿತಿಯ ಸುಬ್ರಮಣಿಯವರು ಮಾತನಾಡಿ, ದೇಶದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯ ಜೀವನಾಡಿಯು ಭಾರತದ ಸಂವಿಧಾನವಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಹಾಗೂ ಉತ್ತಮ ಬದುಕನ್ನು ಸಾಗಿಸಲು ಅವರದೇ ಆದ ಹಕ್ಕು ಭಾದ್ಯತೆಗಳನ್ನು ಪಡೆಯಲು ಹೋರಾಟ ಮಾಡುವ ಹಕ್ಕು ಭಾರತದ ಲಿಖಿತ ಸಂವಿಧಾನದಲ್ಲಿ ಬಾಬಾ ಸಾಹೇಬರು ಬರೆದಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯು ಪವಿತ್ರವಾದ ಸಂವಿಧಾನದ ಸಿದ್ಧಾಂತಗಳನ್ನು ಪಾಲಿಸಬೇಕು. ಸಂವಿಧಾನವನ್ನು ಬರೆದ ವಿಶ್ವ ಜ್ಞಾನಿ, ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್‌ ರ ಹಾದಿಯನ್ನು ಪ್ರತಿಯೊಬ್ಬರು ಅರಿತು ಆರೋಗ್ಯಕರ ಸಮಾಜ ಮತ್ತು ದೇಶವನ್ನು ಕಟ್ಟುವ ಪ್ರಜೆಗಳಾಗಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾ.ಸಂ.ಸಂ ಎಚ್.ಕೃಷ್ಣಪ್ಪ ಮುಖಂಡರುಗಳಾದ ಬತ್ತೆಪ್ಪ, ಆಂಜಿನಪ್ಪ, ಶಿವಾನಂದ, ಬಾಲಾಜಿ, ನಾಗರಾಜ, ವೆಂಕಟೇಶಪ್ಪ, ನಾರಾಯಣಸ್ವಾಮಿ, ಅನುಸೂಯ, ವಿಮಲ, ರಾಧಮ್ಮ, ಮಮತ, ಚನ್ನಕಲ್ ಮಂಜಪ್ಪ, ಕೆಂಚಪ್ಪ, ನಟರಾಜ್, ಮಾಲ್ಗೆರೆ ಉಮೇಶ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News