ಕರ್ನಾಟಕದ ಹಲವಡೆ ಲಘು ಭೂಕಂಪ

Update: 2017-04-18 04:58 GMT

ಬೆಂಗಳೂರು, ಎ,18: ಬೆಂಗಳೂರು, ತುಮಕೂರು, ರಾಮನಗರ, ಮಂಡ್ಯ ಮತ್ತು ಚಾಮರಾಜನಗರದ ಸೇರಿದಂತೆ ಹಲವೆಡೆ ಮಂಗಳವಾರ ಬೆಳಗ್ಗೆ ಲಘು ಭೂಂಪವಾಗಿದೆ.
ಮಂಗಳವಾರ ಬೆಳಗ್ಗೆ 7.35 ರಿಂದ 7.45ರೊಳಗೆ ಭೂಮಿ ಕಂಪಿಸಿದ ಅನುಭವ ಜನರಿಗೆ ಆಗಿದೆ. ಭೂಕಂಪನದಿಂದಾಗಿ ಮನೆಯ ಕಿಟಕಿ ಬಾಗಿಲುಗಳು ನಡುಗಿವೆ,ಜನರು ಭಯಭೀತರಾಗಿ ಮನೆಯಿಂದ ಹೊರಗಡೆ ಬಂದಿದ್ದಾರೆ.
ಬೆಂಗಳೂರು ನಗರದ  ಯಲಹಂಕ ನ್ಯೂಟೌನ್,ರಾಜರಾಜೇಶ್ವರಿ ನಗರ, ಕೆಂಗೇರಿ, ಗಿರಿಧಾಮ ಬಡಾವಣೆ, ಐಡಿಯಲ್ ಹೋಮ್ ಸೊಸೈಟಿ, ಕೆಂಗೇರಿ, ರಾಜಾಜಿನಗರ, ಮಲ್ಲೇಶ್ವರ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವೆಡೆ ಭೂಕಂಪನವಾಗಿದೆ. ಯಲಹಂಕ 
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ, ನೆಟ್ಕಲ್, ಕಿರಗಸೂರು, ಮದ್ದೂರು ತಾಲೂಕಿನ ಮರಳಿಗ ಗ್ರಾಮಗಳಲ್ಲಿ . ರಾಮನಗರದ ಜಿಲ್ಲೆಯ ಚನ್ನಪಟ್ಟಣ, ಮಾಗಡಿ, ಕನಕಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ನಡುಗಿದ ಅನುಭವಾಗಿದೆ. 
ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ಸತ್ತೆಗಾಲ, ಚಾಮರಾಜನಗರದ ತೆಳ್ಳನೂರಿನಲ್ಲಿ ಭೂಕಂಪನವಾಗಿದೆ ಎಂದು ತಿಳಿದು ಬಂದಿದೆ. 
ಕುಣಿಗಲ್ ತಾಲೂಕಿನ ಬೆಟ್ಟಳ್ಳಿಮಠ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಲಘು ಭೂಕಂಪನವಾಗಿದೆ ಎಂದು ಮುಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News