​ಏಕಾಗ್ರತೆಯಿದ್ದಲ್ಲಿ ಯಶಸ್ಸು ಕೈಗೂಡುತ್ತದೆ: ಡಿ.ಸಿ.ಚಂದ್ರಶೇಖರ್

Update: 2017-04-18 11:50 GMT

ಮೂಡಿಗೆರೆ, ಎ.18: ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಗಮನಹರಿಸಿದಲ್ಲಿ ವಿದ್ಯಾರ್ಥಿಗಳನ್ನು ಯಶಸ್ಸಿನಂಚಿಗೆ ಕೊಂಡೊಯ್ಯಲು ಸಾಧ್ಯ ಎಂದು ಸಕ್ಕರಾಯಪಟ್ಟಣದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಸಿ.ಚಂದ್ರಶೇಖರ್ ತಿಳಿಸಿದರು.

ಮೂಡಿಗೆರೆ ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ನೆಸ್ಸೆಸ್ ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿಜ್ಞಾನ ಯುಗ ಮುಂದುವರೆದಿದ್ದು, ನಾವಿಂದು ಚಂದ್ರಲೋಕ, ಮಂಗಳಲೋಕಕ್ಕೆ ಹೋಗುವ ಕನಸು ಕಾಣುತ್ತಿದ್ದೇವೆ. ಆದರೆ ಅಲ್ಲಿ ಬದುಕನ್ನು ಸಾಗಿಸುವತ್ತ ಯಶಸ್ಸು ಸಾಧಿಸಬೇಕು. ಈ ಯಶಸ್ಸು ಸಾಧಿಸಬೇಕಾದರೆ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ತಂತ್ರಜ್ಞಾನವನ್ನು ಸಂಶೋಧನೆ ಮತ್ತು ಅಧ್ಯಯನ ಮೂಲಕ ಪಡೆಯಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ನಟೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರೊ. ಬಿ.ಸಿ.ಬಸವರಾಜಪ್ಪ, ಪ್ರೊ. ಲೋಕೇಶ್, ಪ್ರೊ. ರವೀಂದ್ರ ರಾಜನ್, ಚಂದ್ರಮೌಳಿ, ಪ್ರಶಾಂತ್, ನಾಗೇಶ್, ಅಹಮ್ಮದ್ ಶರೀಫ್,  ಸಂದೀಪ್, ಕುಮಾರಸ್ವಾಮಿ, ಮೋಹನ್, ಪವಿತ್ರ, ಬಿಂದು, ಸರಿತಾ, ವಿಜೇತಾ, ಅಶ್ವಿನಿ, ಜಯರಾಂಗೌಡ, ಸುಂದರೇಶ್, ಸ್ಮಿತಾ, ಕವಿತಾ, ನಿಶಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News