×
Ad

ಹಿಂದಿ ಭಾಷೆ ಹೇರಿಕೆ ಸರಿಯಲ್ಲ: ಜಗದೀಶ್ ಶೆಟ್ಟರ್

Update: 2017-04-18 23:22 IST

ಹುಬ್ಬಳ್ಳಿ, ಎ.18: ಯಾವುದೇ ವ್ಯಕ್ತಿಗಳ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಿಕೆ ಮಾಡುವುದು ಸರಿಯಲ್ಲ ಎಂದು ಮಂಗಳವಾರ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಾತೃ ಭಾಷೆ ಕನ್ನಡ. ಹಿಂದಿ ಭಾಷೆಯನ್ನು ಒತ್ತಾಯ ಹಾಗೂ ಕಡ್ಡಾಯವಾಗಿ ಬೇರೆ ಭಾಷಿಕರ ಮೇಲೆ ಹೇರಿಕೆ ಮಾಡುವುದು ಸರಿಯಲ್ಲ ಎಂದರು.

ಸಂಸದೀಯ ಸಮಿತಿಯೊಂದು ಈ ಸಂಬಂಧ ತನ್ನ ಶಿಫಾರಸು ಸಲ್ಲಿಸಿದೆ. ಆದರೆ, ಅದೇ ಅಂತಿಮವಲ್ಲ. ಈ ಬಗ್ಗೆ ಸಂಸತ್ತಿನಲ್ಲಿ ವ್ಯಾಪಕವಾಗಿ ಚರ್ಚೆಯಾಗಬೇಕು. ಸಂಸತ್ತು ಆ ಶಿಫಾರಸನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು ಎಂದು ಜಗದೀಶ್ ಶೆಟ್ಟರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News