ಕಡೂರು: ಮುಸ್ಲಿಮರಿಂದ ಮಳೆಗಾಗಿ ವಿಶೇಷ ಪ್ರಾರ್ಥನೆ

Update: 2017-04-18 18:11 GMT

ಕಡೂರು, ಎ.18: ರಾಜ್ಯ ತೀವ್ರ ಬರಗಾಲದಿಂದ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಕಡೂರಿನ ಮುಸ್ಲಿಮರು ಮಂಗಳವಾರ ಮಳೆಗಾಗಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಮುಖ್ಯ ಮಸೀದಿ ಆವರಣದಿಂದ 4 ಕಿ.ಮೀ. ದೂರದವರೆಗೆ ಮೆರವಣಿಗೆಯಲ್ಲಿ ತೆರಳಿದ ಮುಸ್ಲಿಮರು ಅಲ್ಲಿನ ವಿಶಾಲವಾದ ಜಮೀನಿನಲ್ಲಿ ನಮಾಝ್ ನಿರ್ವಹಿಸಿದರು. 

4-5 ವರ್ಷಗಳಿಂದ ಕಡೂರು ತಾಲ್ಲೂಕಿನಾದ್ಯಂತ ತೀವ್ರ ಬರಗಾಲವಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ ಎಂಬಂತಾಗಿದೆ. ನೂರಾರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 3 ದಿನಗಳಿಂದ ಪಟ್ಟಣದ ಸುಮಾರು 10 ಮಸೀದಿಗಳಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ.

ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಟ್ಟಣದ ಮುಖ್ಯ ಮಸೀದಿಯ ಹತ್ತಿರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಮರು ಮೆರವಣಿಗೆ ಹೊರಟು ಪಟ್ಟಣದಿಂದ 4  ಕಿ.ಮೀ. ದೂರದ ಹೊರವಲಯಕ್ಕೆ ತಲುಪಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ್‌ರ ಜಮೀನಿನಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News