×
Ad

ಆಟೋ ಚಾಲಕರು ಸರಕಾರಿ ಮಾನದಂಡಗಳನ್ನು ಪಾಲಿಸಿ: ಎಸ್.ನರೇಶ್‌ ನಾಯ್ಕಾ

Update: 2017-04-19 17:04 IST

ಬಾಗೇಪಲ್ಲಿ, ಎ.19: ಆಟೋ ಚಾಲಕರು ಕಡ್ಡಾಯವಾಗಿ ಸರಕಾರಿ ಮಾನದಂಡಗಳನ್ನು ಪಾಲಿಸಿ ಚಾಲನೆ ಮಾಡಬೇಕು ಎಂದು ನೂತನ ಆರಕ್ಷಕ ಉಪ ನಿರೀಕ್ಷಕ ಎಸ್.ನರೇಶ್‌ನಾಯ್ಕಾ ಎಚ್ಚರಿಕೆ ನೀಡಿದರು.

ಇಂದು ಠಾಣೆಯಲ್ಲಿ ಏರ್ಪಡಿಸಿದ್ದ ಆಟೋ ಚಾಲಕರ ಸಭೆಯಲ್ಲಿ ಮಾತನಾಡಿ, ಆಟೋ ಚಾಲಕರು ಸಾರ್ವಜನಿಕರು ಮತ್ತು ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸಿ ಸರಕಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಚಾಲನೆಯಲ್ಲಿದ್ದಾಗ ಸಮವಸ್ತ್ರ, ಚಾಲನಾ ಪರವಾನಿಗೆ ಪತ್ರ ವಾಹನ ಸಂಬಂಧಪಟ್ಟ ದಾಖಲೆಗಳನ್ನು ನಿರಂತರವಾಗಿ ನಿಮ್ಮ ಜತೆಯಲ್ಲೇ ಇರಬೇಕಾಗಿದೆ. ಚಾಲನಾ ಸಮಯದಲ್ಲಿ ಚಾಲಕರು ಮದ್ಯಸೇವನೆ ಮಾಡಬಾರದು. ಒಂದು ವೇಳೆ ಮದ್ಯಸೇವನೆ ಮಾಡಿ ಪ್ರಯಾಣಕರೊಂದಿಗೆ ಅಸಭ್ಯ ಅಶ್ಲೀಲವಾಗಿ ವರ್ತಿಸಿದರೆ ಕಠಿಣ ಶಿಕ್ಷಗೆ ಗುರಿ ಪಡಿಸಲಾಗುವುದು  ಎಂದರು.

ಆಟೋಗಳನ್ನು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನಿಲ್ಲಿಸದೆ ನಿಗದಿಪಡಿಸಿದ ನಿಲ್ದಾಣದಲ್ಲಿ ನಿಲ್ಲಿಸಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರಿ ನಿಯಮಗಳನ್ನು ಕಾನೂನು ರೀತಿಯಲ್ಲಿ ಪಾಲಿಸಬೇಕಾಗಿದೆ. ಈಗ ದಂಡ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಆದರೂ ದ್ವಿಚಕ್ರ ವಾಹನ ಸವಾರರು ತಮ್ಮ ಚಾಳಿಯನ್ನು ಮುಂದುವರೆಸಿದರೆ ಉಗ್ರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಎಎಸ್‌ಐ ಮುದ್ದಪ್ಪ,ಪೇದೆಗಳಾದ ಶಂಕರೆಡ್ಡಿ,ಶ್ರೀನಾಥ್,ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News