ಗರಿಗೆದರಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ
Update: 2017-04-20 12:07 IST
ಬೆಂಗಳೂರು, ಎ.20: ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಮುಂದಾಳತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮತ್ತೆ ಗರಿಗೆದರಿದೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾರ್ಯಾಧ್ಯಕ್ಷ ಮುಕುಡಪ್ಪ ಗುರುವಾರ ಬ್ರಿಗೇಡ್‌ನ ಯುವ ಘಟಕದ 20 ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.
ಯುವ ಘಟಕದ ಅಧ್ಯಕ್ಷರಾಗಿ ವೀರೇಶ್ ಉಂಡೋಡಿ, ಕಾರ್ಯಾಧ್ಯಕ್ಷರಾಗಿ ಆನೇಕಲ್‌ನ ಎಂ.ದೊಡ್ಡಯ್ಯರನ್ನು ನೇಮಕ ಮಾಡಲಾಗಿದೆ.