×
Ad

ಸೋನುನಿಗಮ್ ಮನಸ್ಥಿತಿ ಸರಿಯಿಲ್ಲ: ಯೋಗೇಶ್ ಮಾಸ್ತರ್

Update: 2017-04-20 22:10 IST

ಚಿಕ್ಕಮಗಳೂರು, ಎ.20: ಸೋನು ನಿಗಮ್ ಮುಸ್ಲಿಮರ ವಿರುದ್ಧ ಪೂರ್ವಾಗ್ರಹ ಪೀಡಿತ ಮನಸ್ಥಿತಿ ಉಳ್ಳವರಾದ್ದರಿಂದ ಆಝಾನ್ ಕುರಿತು ಅಪಸ್ವರ ಎತ್ತಿದ್ದಾರೆ. ಅವರ ಮನೆಗಿಂತ ಒಂದು ಕಿ.ಮೀ.ಯಷ್ಟು ದೂರವಿರುವ ಮಸೀದಿಯಿಂದ ಅದೆಂತಹ ಶಬ್ಧ ಅವರ ನಿದ್ದೆಗೆ ಭಂಗವನ್ನುಂಟು ಮಾಡಲು ಸಾಧ್ಯ ಎಂದು ಸಾಹಿತಿ, ಚಿಂತಕ, ಚಿತ್ರ ನಿರ್ದೇಶಕ ಯೋಗೇಶ್ ಮಾಸ್ತರ್ ಪ್ರಶ್ನಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ತಮ್ಮ ನಿರ್ದೇಶನದಲ್ಲಿ ಮೇ.5ರಂದು ಬಿಡುಗಡೆಯಾಗಲಿರುವ "ಮರಳಿ ಮನೆಗೆ" ಚಲನಚಿತ್ರದ ಬಿಡುಗಡೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೋನು ನಿಗಮ್ ರಿಗೆ ಬಾಂಗ್ ನಿಂದ ಕಿರಿಕಿರಿ ಉಂಟಾಗಿರಲು ಸಾಧ್ಯವಿಲ್ಲ. ಅವರ ಮನಸ್ಥಿತಿ ಸರಿ ಇಲ್ಲದಿದ್ದರೆ ಅವರಿಗೆ ಏನೂ ಸರಿಯಾಗಿ ಕಾಣಿಸದು. ಬಾಂಗ್ ಮನುಷ್ಯನನ್ನು ನಿದ್ರೆಯಿಂದ ಎಚ್ಚರಗೊಳಿಸಲು ಸಹಕಾರಿ ಎಂದರು

ತಮ್ಮದೇ ಕಾದಂಬರಿ ಆಧರಿಸಿದ "ಮರಳಿ ಮನೆಗೆ" ಚಿತ್ರ ಬಿಡುಗಡೆಗೆ ಸಜ್ಜುಗೊಳಿಸಲಾಗಿದೆ. ಚಿತ್ರದ ತಾರಾಂಗಣದಲ್ಲಿ ಶೃತಿ, ಸುಜೇಂದ್ರ ಪ್ರಸಾಂದ್, ಅನಿರುದ್ದ್, ಶಂಕರ್ ಆರ್ಯನ್, ಸಹನಾ, ಅರುಂಧತಿ ಜಟ್ಕರ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರದ ಚಿತ್ರಕಥೆ, ಸಾಹಿತ್ಯ ಸಂಗೀತ ಮತ್ತು ನಿರ್ದೇಶನದ ಹೊಣೆಯನ್ನು ಸ್ವತಃ ನಿರ್ವಹಿಸಿರುವುದಾಗಿ ತಿಳಿಸಿದರು

ಚಿತ್ರದಲ್ಲಿ ಗೌರಿ ಲಂಕೇಶ್ ಕೂಡ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಮೈಸೂರಿನ ರಂಗೂಮಿ ಹಿನ್ನೆಲೆಯ ಸುಖದೇವ್ ಮತ್ತು ಅನನ್ಯ ನಟಿಸಿದ್ದಾರೆ. ತಿಪಟೂರು ಸಮೀಪದ ದಂಡಿರ ಶಿವನ, ಅಮ್ಮಸಂದ್ರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಛಾಯಾಗ್ರಹಣ ರಾಜ್ ಶಿವಶಂಕರ್‌ರವರದಾಗಿದೆ. ಗೀತೆಗಳಿಗೆ ಪ್ರಧಾನ ಸ್ಥಾನವಿರುವ ಈ ಚಿತ್ರದಲ್ಲಿ ಮೇಘನಾ ವೆಂಕಟೇಶ್, ಚೇತನ್ ಸಾಸ್ಯಾ, ಮುನಿರಾಜು, ಶ್ವೇತಾ ಪ್ರಭು ಹಾಗೂ ರಘುನಂಧನ್ ಭಟ್ ಹಾಡಿದ್ದಾರೆ. ಸುಭಾಷ್ ಎಲ್.ಗೌಡ ಮತ್ತು ಎಸ್.ಎಲ್.ಲಿಂಗೇಗೌಡ ನಿರ್ಮಾಪಕರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News