ಗೋಶಾಲೆಗೆ ಮೇವು ತರುತ್ತಿದ್ದ ಮೇವಿನ ಲಾರಿಗೆ ಬೆಂಕಿ

Update: 2017-04-21 12:08 GMT

ತುಮಕೂರು, ಎ.21: ಇಲ್ಲಿನ ತಾಲೂಕಿನ ಹೊಸಕೆರೆ ಬಳಿಯ ಚಿಕ್ಕ ಕೆರೆಯಲ್ಲಿ ಗೋಶಾಲೆಗೆ ಮೇವು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗಲಿದ ಘಟನೆ ವರದಿಯಾಗಿದೆ.

ಮಧುಗಿರಿ ತಾಲೂಕು ಕಚೇರಿಯಿಂದ ಮಿಡಿಗೇಶಿ ಗೋಶಾಲೆಗೆ ಬರುತ್ತಿದ್ದ ಲಾರಿಗೆ ಬೆಂಕಿ ತಗಲಿದೆ. ಲಾರಿಯಲ್ಲಿ 8 ಟನ್ ಮೇವು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಿಮಿಸಿದ್ದಾರೆ. ಬೆಂಕಿ ತಗಲಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News