ಜಗತ್ತಿನಲ್ಲೇ ಅತೀ ದೊಡ್ಡ ರೈಲ್ವೆ ಸೇತುವೆ..!
Update: 2017-04-21 23:47 IST
ಇಟ್ಟಿಗೆಗಳಿಂದ ನಿರ್ಮಿಸಲಾಗಿರುವ ಜಗತ್ತಿನ ಅತ್ಯಂತ ದೊಡ್ಡ ರೈಲ್ವೆ ಸೇತುವೆ ‘ಗಾಲ್ಶ್ ವಯಡಕ್ಟ್’ನಲ್ಲಿ ರೈಲೊಂದು ಸಂಚರಿಸುತ್ತಿದೆ. ಜರ್ಮನಿಯ ನೆಟ್ಶ್‌ಕೋದಲ್ಲಿರುವ ಸೇತುವೆಯು 78 ಮೀಟರ್ ಎತ್ತರವಿದೆ ಹಾಗೂ 574 ಮೀಟರ್ ಉದ್ದವಿದೆ. ಸೇತುವೆ ನಿರ್ಮಾಣದಲ್ಲಿ 2.6 ಕೋಟಿ ಇಟ್ಟಿಗೆಗಳನ್ನು ಬಳಸಲಾಗಿದೆ. 1846 ಮೇ 31ರಂದು ಇದರ ನಿರ್ಮಾಣ ಕಾರ್ಯ ಆರಂಭಗೊಂಡಿತು ಹಾಗೂ 1851 ಜುಲೈ 15ರಂದು ಇದನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.