×
Ad

ಕೊಲೆಯಾದ ರಿಯಾಝ್ ಮೌಲವಿ ಮನೆಗೆ ಕುಮಾರಸ್ವಾಮಿ ಭೇಟಿ

Update: 2017-04-22 10:11 IST

ಮಡಿಕೇರಿ, ಎ.22: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಕಾಸರಗೋಡಿನ ಬೆಟ್ಟಂಪಾರೆ ಹಳೆ ಚೂರಿ ಎಂಬಲ್ಲಿ ತಿಂಗಳ ಹಿಂದೆ ಕೊಲೆಯಾದ ಮದ್ರಸ ಅಧ್ಯಾಪಕ ರಿಯಾಝ್ ಮೌಲವಿ ಅವರ ಕುಟುಂಬವನ್ನು ಮಡಿಕೇರಿಯ ಕೊಟ್ಟಮಡಿ ಗ್ರಾಮದ ಅವರ ಮನೆಯಲ್ಲಿ ಶುಕ್ರವಾರ ಭೇಟಿಯಾಗಿ ಸಾಂತ್ವನ ಹೇಳಿದರು.

ಈ ವೇಳೆ ಅವರು ರಿಯಾಝ್ ಅವರ ಪತ್ನಿ ಸೈದಾ ಹಾಗೂ ಒಂದು ವರ್ಷದ ಮಗಳಿಗೆ ಒಂದು ಲಕ್ಷ ರೂ. ಪರಿಹಾರವನ್ನು ನೀಡಿದರು.

ಜೆಡಿಎಸ್ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಹಾಗೂ ಮಾಜಿ ಸಚಿವ ಜೀವಿಜಯ ಈ ಸಂದರ್ಭ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News