×
Ad

ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರನ್ನು ಹುಡುಕಿ ಕೊಡಿ: ಕೊಪ್ಪ ಠಾಣೆಗೆ ಕಾಂಗ್ರೆಸ್ಸಿಗರ ದೂರು

Update: 2017-04-22 22:18 IST

ಚಿಕ್ಕಮಗಳೂರು, ಎ.22:ಸಂಸದೆ ಶೋಭಾ ಕರಂದ್ಲಾಜೆಯವರು ನಾಪತ್ತೆಯಾಗಿದ್ದು, ಅವರನ್ನು ಹುಡುಕಿ ಕೊಡುವಂತೆ ಒತ್ತಾಯಿಸಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 ಮಲೆನಾಡಿಗೆ ಮರಣ ಶಾಸನವಾಗಿರುವ ಕಸ್ತೂರಿರಂಗನ್ ವರದಿಯ ಬಗ್ಗೆ ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆಯವರು ಚಕಾರ ಎತ್ತುತ್ತಿಲ್ಲ. ಅವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲಿಕ್ಕಾಗಿಯೇ ಹೊರತು ಜನರ ಸಮಸ್ಯೆ ಪರಿಹರಿಸಲಿಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕಸ್ತೂರಿ ರಂಗನ್ ವರದಿ ಕುರಿತಂತೆ ಸಂಸದರ ಸಭೆಗೂ ಶೋಭಾ ಕರಂದ್ಲಾಜೆ ಪಾಲ್ಗೊಂಡಿಲ್ಲ.. ಜನರ ಸಮಸ್ಯೆ ಬಗ್ಗೆ ಆಯಾ ಸಭೆಯಲ್ಲಿ ಪಾಲ್ಗೊಂಡು ಧ್ವನಿ ಎತ್ತಬೇಕಿತ್ತು. ಅದಾದ ಬಳಿಕ ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಇಂದು ಜನರ ಕೈಗೂ ಸಿಗುತ್ತಿಲ್ಲ. ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನೀಡುವ ದೂರಿನಲ್ಲಿ ತಿಳಿಸಿದ್ದಾರೆ.

  ಈ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದೆ. ಆದರೂ ಸಂಸದರು ಈ ತನಕ ಮೌನವನ್ನು ಮುರಿದಿಲ್ಲ. ಈ ಹಿನ್ನೆಲೆಯಲ್ಲಿ ಅವರ ನಡೆಯ ಬಗ್ಗೆ ಅನುಮಾನ ಮೂಡುವಂತಾಗಿದೆ ಎಂದು ಹೇಳಿಕೊಂಡಿದ್ದಾರೆ.

  ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀರ್ ಕುಮಾರ್ ಮುರೋಳ್ಳಿ, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಇನೇಶ್, ಕಸಾಬಾ ಹೋಬಳಿ ಅಧ್ಯಕ್ಷ ಎಸ್.ಸುಭ್ರಮಣ್ಯ ಶೆಟ್ಟಿ, ಮಾಜಿ ಪಪಂ ಅಧ್ಯಕ್ಷೆ ಸಿ.ಕೆ.ಮಾಲತಿ, ಮುಖಂಡರಾದ ನವೀನ್ ಮಾವಿನಕಟ್ಟೆ, ಹರೀಶ್ ಭಂಡಾರಿ, ವಿಥಲ್ ಕುಮಾರ್, ಬರ್ಕತ್ ಅಲಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News