ಕೊಳವೆ ಬಾವಿಯಿಂದ ಬಾಲಕಿಯನ್ನು ಮೇಲೆಕ್ಕೆತ್ತಲು ಮುಂದುವರಿದ ಕಾರ್ಯಾಚರಣೆ

Update: 2017-04-24 04:44 GMT

ಬೆಳಗಾವಿ, ಎ.24:ಬೆಳಗಾವಿ ಜಿಲ್ಲೆಯ  ಅಥಣಿ ತಾಲೂಕಿನ  ಝುಂಜರವಾಡ ಗ್ರಾಮದಲ್ಲಿ 6 ವರ್ಷದ ಪುಟಾಣಿ ಕಾವೇರಿ ಕೊಳವೆ ಬಾವಿಗೆ ಬಿದ್ದು 37 ಗಂಟೆ ಕಳೆದರೂ, ಕಾರ್ಯಾಚರಣೆಯ ಮೂಲಕ ಆಕೆಯನ್ನು ಮೇಲೆಕ್ಕೆತ್ತಲು ಸಾಧ್ಯವಾಗಿಲ್ಲ. ಇನ್ನೂ  ಕಾರ್ಯಾಚರಣೆ ಮುಂದುವರಿದಿದೆ
ಇಂದು ಬೆಳಗ್ಗೆ ಮತ್ತೆ ಕೊಳೆವೆ ಬಾವಿಗೆ  ಸಿಸಿಟಿವಿ ಕ್ಯಾಮೆರಾವನ್ನು ಇಳಿ ಬಿಟ್ಟು ಬಾಲಕಿಯ ಚಲನವಲನ ಗಮನಿಸಲಾಗಿತ್ತು. ಆದರೆ ಆದರೆ ಕೊಳವೆ ಬಾವಿಯಲ್ಲಿ ಬಾಲಕಿಯ ಕೈ ಮಾತ್ರ ಕಾಣಿಸುತ್ತಿದ್ದು, ಕೈಯಲ್ಲಿ ಯಾವುದೇ ಚಲನೆ ಇಲ್ಲ.ಸುಮಾರು 22 ಅಡಿ ಆಳದಲ್ಲಿ ಸಿಲುಕಿರುವ ಬಾಲಕಿ ಕಾವೇರಿ ಆಮ್ಲಜನಕದ ಕೊರತೆಯಿಂದಾಗಿ ಬದುಕಿ ಉಳಿವ ಸಾಧ್ಯತೆ ಕ್ಷೀಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಕೊಳವೆ ಬಾವಿ ಕೊರೆಸಿದ್ದ ಜಮೀನು ಮಾಲೀಕ ಶಂಕರಪ್ಪ ಹಿಪ್ಪರಗಿ ಬಂಧನ  ಭೀತಿಯಿಂದಾಗಿ  ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News