ಇಂದು ನಾಡಿನಾದ್ಯಂತ ಡಾ. ರಾಜ್ ಕುಮಾರ್ ಜನ್ಮದಿನದ ಸಂಭ್ರಮ

Update: 2017-04-24 05:35 GMT

ಬೆಂಗಳೂರು, ಎ.24: ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 88ನೇ ಜನ್ಮ ದಿನಾಚರಣೆ ಅಂಗವಾಗಿ ಇಂದು  ಡಾ. ರಾಜ್ ಸಮಾಧಿ ಬಳಿ ಅವರ ಕುಟುಂಬದ ಸದಸ್ಯರು ಆಗಮಿಸಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
1929, ಎ. 24ರಂದು  ಜನಿಸಿದ್ದ ಡಾ.ರಾಜ್ ಕುಮಾರ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಇಡೀ ಕನ್ನಡ  ಚಿತ್ರರಂಗದಲ್ಲಿ ಅನನ್ಯ ಸಾಧನೆ ಮಾಡಿದ್ದರು. ನಾಡಿನಾದ್ಯಂತ ರಾಜ್ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ  ಆಚರಿಸುತ್ತಿದ್ದಾರೆ.
ಹುಟ್ಟು ಹಬ್ಬದ ಅಂಗವಾಗಿ ಸಮಾಧಿಯ ಬಳಿ ಡಾ. ರಾಜ್ ಕುಮಾರ್ ಅವರ ’ಬಂಗಾರದ ಮನುಷ್ಯ’ ಚಿತ್ರದ ಆಡಿಯೋವನ್ನು ಅವರ ತಂಗಿ ನಾಗಮ್ಮ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ ಪುತ್ರ ಪವರ‍್ ಸ್ಟಾರ್ ಪುನೀತ್ ರಾಜ್ ಕುಮಾರ‍್ ಅವರು ಅಭಿಮಾನವೇ ಅಪ್ಪಾಜಿ ಹುಟ್ಟುಹಬ್ಬಕ್ಕೆ ನೀಡುವ ಕೊಡುಗೆ ಎಂದು ಹೇಳಿದರು.
 ಡಾ. ಶಿವರಾಜ್ ಕುಮಾರ‍್ "ಅಪ್ಪಾಜಿಯ ಪುತ್ರರಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ಗೂಗಲ್ ಸಂಸ್ಥೆ ತನ್ನ ಮುಖಪುಟದಲ್ಲಿ ಡಾ.ರಾಜ್ ಅವರ ಚಿತ್ರವನ್ನು ಅಳವಡಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.ರಾಜಕುಮಾರ‍್  ಚಿತ್ರತಂಡದಿಂದ ಚಿತ್ರ ಪ್ರಿಯರಿಗಾಗಿ ವಿಶೇಷ ಆಫರ್ ನೀಡಲಾಗಿದೆ. ಸಿನಿಮಾದ ಟಿಕೆಟ್ ದರವನ್ನು ಶೇ.50 ರಷ್ಟು ಇಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News