ಹೈಟೆಕ್ ವೈಶ್ಯಾವಾಟಿಕ ನಡೆಸುತ್ತಿದ್ದ ಪೊಲೀಸ್‌ ಹೆಡ್‌ ಕಾನ್ ಸ್ಟೇಬಲ್ ಸೆರೆ

Update: 2017-04-24 08:56 GMT

ಬೆಂಗಳೂರು,ಎ.24: ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಒಬ್ಬರು  ಹೈಟೆಕ್ ವೈಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯ ಅಪರಾಧ ಪತ್ತೆ ದಳದ ಮುಖ್ಯ ಪೇದೆ ಕರಿಬಸಪ್ಪ ಎಂಬಾತನೇ ಈ ದಂಧೆಯಲ್ಲಿ ತೊಡಗಿದ್ದ  ಆರೋಪಿ.

ಕರಿಬಸಪ್ಪನನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.  ಕರಿಬಸಪ್ಪ ಆನ್‌ಲೈನ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಕ್ಯಾಷ್‌ಲೆಸ್ ವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕರಿಬಸಪ್ಪ ಇನ್ನಿಬ್ಬರೊಂದಿಗೆ ಸೇರಿಕೊಂಡು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವುದಾಗಿ ಹೇಳಿರುವ ಪೊಲೀಸರು ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಕರಿಬಸಪ್ಪನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಪೊಲೀಸರು ತಿಳಿಸಿದ್ದಾರೆ.

ವಾರದ ಹಿಂದೆ ಪೊಲೀಸರು ಮೈಕೊ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಹೈಟೆಕ್ ವೈಶ್ಯಾವಾಟಿಕೆ ಜಾಲ ಬೆಳಕಿಗೆ ಬಂದಿತ್ತು. ಮೂವರು ಯುವತಿಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News