ಹಾಸನದಲ್ಲಿ ಪ್ರಥಮ ಬಾರಿಗೆ ರೋಬೋಟ್ ಕಾಡುಪ್ರಾಣಿಗಳ ಪ್ರದರ್ಶನ

Update: 2017-04-25 16:48 GMT

ಹಾಸನ, ಎ.25: ನಗರದ ತಣ್ಣಿರುಹಳ್ಳ ಸಮೀಪ ದೊಡ್ಡಮಂಡಿಗನಹಳ್ಳಿ ಬಳಿ ಡಿಜೆ ಅಮ್ಯೂಸ್‌ಮೆಂಟ್ಸ್ ವತಿಯಿಂದ ರೋಬೋಟ್ ಕಾಡು ಪ್ರಾಣಿಗಳ ಪ್ರದರ್ಶನ ಹಾಗೂ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಡಿಜೆ ಅಮ್ಯೂಸ್‌ಮೆಂಟ್ಸ್ ವ್ಯವಸ್ಥಾಪಕ ವಿಜ್ ವಿಲ್ಸನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರತಿದಿನ ಸಂಜೆ 4:30ರಿಂದ 9:30ರವರೆಗೆ ಮಕ್ಕಳ ಮನೋರಂಜನೆಯ ವಸ್ತು ಪ್ರದರ್ಶನ ನಡೆಯಲಿದೆ. ಎರಡು ಕಾರು ಮತ್ತು ನಾಲ್ಕು ಬೈಕುಗಳಿಂದ ಸಾಹಸಮಯ ಪ್ರದರ್ಶನ ನಡೆಯಲಿದೆ. ಕೊಲಂಬಸ್, ಡ್ರಾಗನ್ ಟ್ರೈನ್, ಸೊಲಂಬೋ, ಬ್ರೇಕ್ ಡ್ಯಾನ್ಸ್ ಹಾಗೂ ಇನ್ನಿತರ ಮನರಂಜನೆಯ ಕಾರ್ಯಕ್ರಮ ನಡೆಯಲಿದೆ. ಗೃಹ ಬಳಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಕೂಡ ನಡೆಯಲಿದೆ ಎಂದರು.

ಇದೇ ಮೊದಲ ಬಾರಿಗೆ ರೋಬೋಟ್ ಕಾಡು ಪ್ರಾಣಿಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪ್ರಾಣಿಗಳನ್ನು ರೂಪಿಸಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಸ್ತು ಪ್ರದರ್ಶನದಲ್ಲಿ ಬರುವ ಆದಾಯದ ಭಾಗದಲ್ಲಿ ಕೆಲ ಹಣವನ್ನು ಅನಾಥಶ್ರಮಕ್ಕೆ ವೆಚ್ಚ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಜೆ ಅಮ್ಯೂಸ್‌ಮೆಂಟ್ಸ್‌ನ ಸದಸ್ಯರು ರವೀಂದ್ರನಾಥ್, ಆರಿಫ್, ಮೋಹನ್‌ದಾಸ್, ಅಪೋಘವಾಣಿ ದಿನಪತ್ರಿಕೆ ಸಂಪಾದಕರು ಎಸ್.ಡಿ. ರಂಗಸ್ವಾಮಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News