ಕೋಮುಶಕ್ತಿಗಳಿಗೆ ಅಂಬೇಡ್ಕರ್‌ ಭಾವಚಿತ್ರ ಬಳಸುವ ಯೋಗ್ಯತೆಯಿಲ್ಲ: ಅತ್ರಾಡಿ ಅಮೃತಾ ಶೆಟ್ಟಿ

Update: 2017-04-28 11:29 GMT

ಮೂಡಿಗೆರೆ, ಎ.28: ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸುವ ಕೋಮುಶಕ್ತಿಗಳಿಗೆ ಅಂಬೇಡ್ಕರ್‌ ಭಾವಚಿತ್ರಗಳನ್ನು ಬಳಸುವ ಯೋಗ್ಯತೆಯಿಲ್ಲ ಎಂದು ಸಾಹಿತಿ, ಲೇಖಕಿ ಅತ್ರಾಡಿ ಅಮೃತಾ ಶೆಟ್ಟಿ ಹೇಳಿದರು.

ತಾಲೂಕು ಬಿಎಸ್‌ಪಿ ಇಲ್ಲಿನ ಗೋಣಿಬೀಡು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನಮ್ಮ ದೇಶದಲ್ಲಿ ನಿಜವಾದ ಸ್ವಾಭಿಮಾನಿಗಳಿದ್ದರೆ ಅದು ಈ ದಲಿತ ಸಮೂಹ. ಪ್ರತಿಯೊಬ್ಬ ಮನುಷ್ಯರಲ್ಲೂ ಬಾಬಾ ಸಾಹೇಬ್ ನಮ್ಮವರು ಎನ್ನುವ ಮನೋಭಾವ ಮೂಡಿದಾಗ ಅಂದು ಪ್ರಜಾಪ್ರಭುತ್ವ ಸರಿದಾರಿಯಲ್ಲಿ ಸಾಗುತ್ತದೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿಗೆ ಪಂಚಶೀಲ ತತ್ವಗಳನ್ನು ಬೋಧಿಸಿದರೆ ಈ ದೇಶದಲ್ಲಿ ಸಾವು-ನೋವುಗಳು ಸಂವಿಸುವುದಿಲ್ಲ ಎಂದು ನುಡಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದು ಬಿಎಸ್‌ಪಿಯ ನಿಲುವಾಗಿದೆ. ಇಂದು ಆಳುವ ಸರಕಾರಗಳು ಜನರನ್ನು ತುಳಿಯುತ್ತಿವೆ. ಸರಕಾರಗಳು ದೇವಸ್ಥಾನಗಳಿಗೆ ಕೊಡುವ ಪ್ರಾಶಸ್ತ್ಯವನ್ನು ಬಡವರ ಮನೆಯ ಶೌಚಾಲಯಕ್ಕೂ ಕೊಡುತ್ತಿಲ್ಲ ಎಂದರು.

ಯುವ ಮುಖಂಡ ಮರಗುಂದ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನ ಸರಿಯಾಗಿ ಇನ್ನೂ ಜಾರಿಯಾಗಿಲ್ಲ. ಜಾರಿ ಮಾಡಬೇಕಾದ ಜಾಗದಲ್ಲಿ ಅಂಬೇಡ್ಕರ್ ವಿರೋಧಿಗಳು ಕುಳಿತಿದ್ದಾರೆ. ಅಂಬೇಡ್ಕರ್ ಹೆಸರನ್ನು ಈ ದೇಶದಲ್ಲಿ ಬಂಡವಾಳ ಮಾಡಿಕೊಂಡಿರುವ ಮನುವಾದಿಗಳು ಓಟಿನ ಮತಯಂತ್ರವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವೇಲಾಯುಧನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಪರಮೇಶ್ವರ್, ಜಿಲ್ಲಾ ಕಚೇರಿ ಕಾರ್ಯದರ್ಶಿ ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಲೋಕವಳ್ಳಿ ರಮೇಶ್, ಜಿಲ್ಲಾ ಸಮಿತಿ ಸದಸ್ಯ ಬಿ.ಎಂ.ಶಂಕರ್, ಬಿಎಸ್‌ಪಿ ಮುಖಂಡರಾದ ಯು.ಬಿ.ಮಂಜಯ್ಯ, ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪಿ.ಕೆ.ಮಂಜುನಾಥ್, ಕಚೇರಿ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಬಿವಿಎಸ್ ತಾಲೂಕು ಸಂಯೋಜಕ ಚಂದ್ರಶೇಖರ್, ಅವಿನಾಶ್, ಜಯಪಾಲ್, ಹೋಬಳಿ ಅಧ್ಯಕ್ಷ ಉದುಸೆ ಸುರೇಶ್, ಮುಖಂಡರಾದ ನಾಗೇಶ್, ಗಿರೀಶ್, ಮಂಜು, ಪ್ರಕಾಶ್, ಜಯಮ್ಮ, ಧರ್ಮವತಿ, ಪಾರ್ವತಿ, ಮತ್ತಿತರರಿದ್ದರು. ಪರಮೇಶ್ ಸ್ವಾಗತಿಸಿದರು. ಸುಬ್ರಹ್ಮಣ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News