×
Ad

ಕುಡಿದ ಮತ್ತಿನಲ್ಲಿ ಆ್ಯಂಬುಲೆನ್ಸ್ ಗೆ ಕರೆಮಾಡಿ ಗಾಜು ಪುಡಿ ಪುಡಿ ಮಾಡಿದರು !

Update: 2017-04-29 18:05 IST

ತುಮಕೂರು.ಏ.29 : ಕುಡಿದ ಮತ್ತಿನಲ್ಲಿ 108 ವಾಹನಕ್ಕೆ ಹುಷಾರಿಲ್ಲವೆಂದು ಕೆರೆ ಮಾಡಿ, ಸರಕಾರಿ ಆಸ್ಪತ್ರೆಯ ಬದಲು ಖಾಸಗಿ ಹಾಸ್ಟಿಲ್‌ಗೆ ಕರೆದುಕೊಂಡು ಹೋಗುವಂತೆ ವಾಹನ ಚಾಲಕನೊಂದಿಗೆ ಜಗಳ ತೆಗೆದು, ವಾಹನದ ಕಿಟಕಿಯನ್ನು ಪುಡಿ ಪುಡಿ ಮಾಡಿದ ಮೂವರು ಆರೋಪಿಗಳನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗುಬ್ಬಿ ತಾಲೂಕು ಪುಲ್ಲಿಂಗನಹಳ್ಳಿಯ ರಾಕೇಶ್, ಗಿರೀಶ್ ಮತ್ತು ನಟರಾಜ್ ಎಂದು ಗುರುತಿಸಲಾಗಿದೆ.

ಇವರುಗಳು ಹುಷಾರಿಲ್ಲವೆಂದು 108 ವಾಹನಕ್ಕೆ ಕರೆ ಮಾಡಿ, ವಾಹನವನ್ನು ಕರೆಯಿಸಿಕೊಂಡು ತುಮಕೂರಿಗೆ ಹೋಗುವಂತೆ ಹೇಳಿದ್ದಾರೆ.108 ವಾಹನ ಚಾಲಕ ನಗರದ ಸರಕಾರಿ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಲು ಮುಂದಾಗಿದ್ದಾನೆ. ಈ ವೇಳೆ ಚಾಲಕನೊಂದಿಗೆ ಜಗಳ ತೆಗೆದ ಮೂವರು, ಖಾಸಗಿ ಆಸ್ಪತ್ರೆಗೆ ಹೋಗುವಂತೆ ಒತ್ತಾಯಿಸಿದ್ದಾರೆ.ಇದಕ್ಕೆ ಡ್ರೈವರ್ ಒಪ್ಪದಿದ್ದಾಗ ವಾಹನದ ಮುಂಬದಿ ಮತ್ತು ಹಿಂಬದಿಯ ಕಿಟಕಿ ಗಾಜುಗಳನ್ನು ಒಡೆದು, ಡ್ರೈವರ್ ಮೇಲೆಯೂ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News