ಎಸ್.ಎಂ.ಕೃಷ್ಣ ಮೊಮ್ಮಗನಿಂದ ಉಚಿತ ಆರೋಗ್ಯ ತಪಾಸಣೆ
ಕಡೂರು, ಎ.30: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಡಾ.ನಿರಂತರ್ ಗಣೇಶ್ ಕಡೂರು ತಾಲೂಕಿನ ಸರಸ್ವತಿಪುರದಲ್ಲಿ ರವಿವಾರ ಉಚಿತ ಆರೋಗ್ಯ ತಪಾಸಣೆ ನಡೆಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಗ್ರಾಮದ 500 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿದ್ದಲ್ಲದೆ ಪ್ರತಿಯೊಬ್ಬ ರೋಗಿಗೂ ಉಚಿತವಾಗಿ ಔಷಧಿಗಳನ್ನು ನೀಡಿ ಚಿಕಿತ್ಸೆ ಮಾಡಲಾಯಿತು.
ಪ್ರಮುಖವಾಗಿ ಈ ಆರೋಗ್ಯ ಶಿಬಿರದಲ್ಲಿ ಅರ್ಥೋಪೆಡಿಕ್ಸ್ ಸಂಬಂಧಿಸಿದ್ದ ರೋಗ, ಕಣ್ಣಿನ ಸಮಸ್ಯೆ, ಕಿವಿ-ಗಂಟಲು ಸಮಸ್ಯೆ, ಮೂಗು, ಹೆಂಗಸರಿಗೆ ಗರ್ಭಕೋಶದ ಸಮಸ್ಯೆ, ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆಗಳನ್ನು ನೀಡಲಾಯಿತು.
ಸಮಸ್ಯೆ ಇರುವಂತಹ ಪ್ರತಿಯೊಬ್ಬರು ಈ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು, ಆರೋಗ್ಯ ತಪಾಸಣೆಗೆ ಬೆಂಗಳೂರಿನ ಪ್ರಸಿದ್ದ ಆಸ್ವತ್ರೆಯಾದ ರಾಮಯ್ಯ ಆಸ್ವತ್ರೆಯಿಂದ 12 ಕ್ಕೂ ಹೆಚ್ಚು ತಜ್ಞ ವೈದ್ಯರು ಆಗಮಿಸಿದ್ದರು. ಇಬ್ಬರೂ ಅರ್ಥೋಪೆಡಿಕ್ಸ್ ಸರ್ಜನ್, ಒಬ್ಬ ಘೈನೋಕಾಲಜಿಸ್ಟ್, ಹೃದಯ ಸಂಬಂಧಿ ವೈದರು, ಸರ್ಜರಿ ವಿಭಾಗದ ವೈದ್ಯರು ಸೇರಿದಂತೆ ಹಲವು ವೈದ್ಯರು ಬೆಂಗಳೂರಿನಿಂದ ಆಗಮಿಸಿ ಉಚಿತವಾಗಿ ಪ್ರತಿಯೊಬ್ಬ ರೋಗಿಗೂ ಚಿಕಿತ್ಸೆಯನ್ನು ನೀಡಿ ಉಚಿತವಾಗಿ ಔಷಧಿಯನ್ನು ವಿತರಿಸಿದರು.