ಶುದ್ಧ ನೀರಿನ ಘಟಕದ ಯಂತ್ರ ದುರಸ್ಥಿಗೆ ಆಗ್ರಹ

Update: 2017-04-30 13:12 GMT

ಹುಳಿಯಾರು,ಎ.30: ಹುಳಿಯಾರಿನ ಸರಕಾರಿ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಬಳಿ ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸ್ಥಾಪಿಸಿರುವ ಶುದ್ಧ ನೀರಿನ ಘಟಕದಲ್ಲಿ ಕೆಟ್ಟಿರುವ ಶುದ್ಧಿಕರಣ ಯಂತ್ರವನ್ನು ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪದವಿ ಕಾಲೇಜಿನ ಬಳಿಯಿರುವ ಈ ಶುದ್ಧ ನೀರಿನ ಘಟಕದಿಂದ ಹುಳಿಯಾರು,ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ಸೋಮಜ್ಜನಪಾಳ್ಯ, ಕಾಮಶೆಟ್ಟೆಪಾಳ್ಯ, ಕೆಂಕೆರೆ, ಗೌಡಗೆರೆ, ವೈ.ಎಸ್.ಪಾಳ್ಯ, ಕೋಡಿಪಾಳ್ಯದ ಗ್ರಾಮಸ್ಥರು ಶುದ್ಧ ನೀರನ್ನು ಕೊಂಡುಯ್ಯುತ್ತಿದ್ದರು. ಈಗ ಯಂತ್ರ ಕೆಟ್ಟು ನಿಂತಿರುವುದರಿಂದ ಜನರು ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹುಳಿಯಾರು, ಕೆಂಕೆರೆ ಗ್ರಾಮಗಳನ್ನು ಬಿಟ್ಟರೆ ಉಳಿದ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳಿಲ್ಲ.ಹಾಗಾಗಿ ಸುತ್ತಮುತ್ತಲ ಹಲವು ಹಳ್ಳಿಗಳ ಜನರು ಶುದ್ದ ಕುಡಿಯವ ನೀರಿಗಾಗಿ ಸರಕಾರದವತಿಯಿಂದ ಸ್ಥಾಪಿಸಿರುವ ಈ ಘಟಕದ ಮೇಲೆ ಅವಲಂಬಿತರಾಗಿದ್ದರು.ಸದರಿ ಘಟಕ ಕೆಟ್ಟಿರುವುದರಿಂದ ದುಬಾರಿ ಹಣ ತೆತ್ತು ಖಾಸಗಿ ಘಟಕಗಳಿಂದ ಕುಡಿಯುವ ನೀರು ಖರೀದಿಬೇಕಾಗಿದೆ.

ಸದರಿ ಘಟಕದಲ್ಲಿ ಪದೇ ಪದೇ ಶುದ್ಧಿಕರಣ ಯಂತ್ರ ಕೆಟ್ಟು ಹೋಗುತ್ತಿದ್ದು,ಕೆಲ ದಿನಗಳ ಹಿಂದೆ ದುರಸ್ಥಿಚಿಾಗಿದ್ದ ಘಟಕ ಈಗ ಮೂರ್ನಾಲ್ಕು ದಿನಗಳಿಂದ ಪುನಃ ಕೆಟ್ಟು ಹೋಗಿದೆ. ಹಾಗಾಗಿ ತಕ್ಷಣ ಯಂತ್ರ ದುರಸ್ಥಿ ಮಾಡಿಸಿ ಹತ್ತಾರು ಹಳ್ಳಿಗಳ ಶುದ್ಧ ನೀರಿನ ಸಮಸ್ಯೆಗೆ ಮುಕ್ತಿ ಕಾಣಿಸಬೇಕಿದೆ.

ಅಲ್ಲದೆ ಪದೇ ಪದೇ ಕೆಟ್ಟು ಹೋಗದಂತೆ ಗುಣಮಟ್ಟದ ಯಂತ್ರಗಳನ್ನು ಅಳವಡಿಸುವಂತೆ ಹುಳಿಯಾರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News