×
Ad

ಕಾರುಗಳ ನಡುವೆ ಢಿಕ್ಕಿ : ಒಂದೇ ಕುಟುಂಬದ ನಾಲ್ವರು ಗಂಭೀರ ಗಾಯ

Update: 2017-04-30 18:46 IST

ಸಿದ್ದಾಪುರ, ಎ.30: ಗೋಣಿಕೊಪ್ಪ ಸಿದ್ದಾಪುರ ಮುಖ್ಯ ರಸ್ತೆಯ ವಡ್ಡರಕಾಡು ಸಮೀಪ ಕಾರುಗಳ ಮಧ್ಯೆ ಢಿಕ್ಕಿ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಗಂಭೀರ ಗಾಯಗಳೊಂದಿಗೆ ಮೈಸೂರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ರವಿವಾರ ನಡೆದಿದೆ.

ಸಿದ್ದಾಪುರದ ಅಬ್ದುಲ್  ರಹ್ಮಾನ್ (36) ಎಂಬವರು ತಮ್ಮ ಕುಟುಂಬ ಸಮೇತ ಸಿದ್ದಾಪುರ ಮಾರ್ಗವಾಗಿ ಸಮೀಪದ ಬಜಗೊಲ್ಲಿಗೆ ಮದುವೆ ಕಾರ್ಯಕ್ರಮಕ್ಕೆ ಸಾನ್ಟ್ರೋ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಪಾಲಿಬೆಟ್ಟದ ಮಸ್ಕಲ್ ಎಸ್ಟೇಟಿನ ಮಾಲಿಕನ ಪುತ್ರನ ವಾಹನ ಎನ್ನಲಾದ ಎಕ್ಸ್‌ಯುವಿ ಕಾರ್ ಸಿದ್ದಾಪುರ ಕಡೆಗೆ ಬರುತ್ತಿದ್ದ ವೇಳೆ ಕಾರುಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಅಬ್ದುಲ್  ರಹ್ಮಾನ್  ಸೇರಿದಂತೆ ಪತ್ನಿ ಉಮೈಬ (31) ಮಕ್ಕಳಾದ ಸುಫಿಯಾನ್ (12) ಹಾಗೂ ಅಮೀನ್ (7) ಎಂಬವರಿಗೆ ಗಾಯಗಳಾಗಿದ್ದು, ತಕ್ಷಣ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದೆ. ಬಳಿಕ ಎಲ್ಲರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅಮೀನ್ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ತಿಳಿದು ಬಂದಿದೆ.

ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News