ಬಾಹುಬಲಿ-2 ಟಿಕೆಟ್ ದರ ದುಬಾರಿ ಖಂಡಿಸಿ ಕರವೇ ಸಂಘಟನೆಯಿಂದ ಚಲನಚಿತ್ರ ಮಂದಿರಕ್ಕೆ ಮುತ್ತಿಗೆ

Update: 2017-04-30 14:51 GMT

ಹಾಸನ,ಎ.30: ಬಾಹುಬಲಿ-2 ಚಲನಚಿತ್ರದ ಟಿಕೆಟ್ ದರ ದುಬಾರಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಚಲನಚಿತ್ರ ಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದಲ್ಲದೆ ಆಕ್ರೋಶವ್ಯಕ್ತಪಡಿಸಿದರು.

ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ನೇತೃತ್ವದಲ್ಲಿ ನಗರದ ಎಸ್‌ಬಿಜಿ ಥಿಯೇಟರ್‌ಗೆ ಭಾನುವಾರ ಬೆಳಿಗ್ಗೆ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಪರ ಭಾಷೆ ಚಿತ್ರಕ್ಕೆ ಒಂದು ಟಿಕೆಟ್‌ಗೆ 150 ರೂ ಮಾಡಿರುವುದನ್ನು ಖಂಡಿಸಿದರು. ಆಗೇ ಇತರೆ ಚಿತ್ರವನ್ನು ನಗರದ ನಾಲ್ಕು ಚಿತ್ರ ಮಂದಿರದಲ್ಲಿ ಬಿಡುಗಡೆ ಮಾಡಿರುವುದಕ್ಕೆ ವಿರೋಧವ್ಯಕ್ತಪಡಿಸಿದರು.

ಕೂಡಲೇ ಈ ಚಲನಚಿತ್ರದ ಡಿಸ್ಟ್ರಿಬ್ಯೂಟರ್ ಸ್ಥಳಕ್ಕೆ ಬರುವಂತೆ ಎಸ್‌ಬಿಜಿ ಥಿಯೇಟರ್ ಮಾಲೀಕರೊಂದಿಗೆ ಮಾತಿನ ವಾಗ್ವಾದ ನಡೆಸಿದರು. ಸ್ಥಳಕ್ಕೆ ಬಂದ ಚಿತ್ರದ ಸಂಬಂಧಪಟ್ಟವರು ಇಂದು ನಗರದ 4 ಥಿಯೇಟರ್‌ನಲ್ಲಿ ಮೂರು ಥಿಯೇಟರ್ ಕೊನೆ ಪ್ರದರ್ಶನವಾಗಲಿದೆ. ನಾಳೆಯಿಂದ ಪೃಥ್ವಿ ಥಿಯೇಟರ್ ಒಂದು ಕಡೆ ಮಾತ್ರ ಪ್ರದರ್ಶನಗೊಳ್ಳುವುದಾಗಿ ಹೇಳಿದರು. ಆಗೇ ಟಿಕೆಟ್ ಧರವನ್ನು 150 ರಿಂದ 80 ರೂಗಳಿಗೆ ಇಳಿಸುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆಗಾರರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟರು. ನಂತರ ಪೃಥ್ವಿ ಚಲನಚಿತ್ರ ಮಂದಿರಕ್ಕೆ ತೆರಳಿ ಅಲ್ಲೂ ಕೂಡ ಪ್ರತಿಭಟನೆ ನಡೆಸಿದರು. 150 ರೂ ಇರುವ ಧರದ ಪ್ರಕಟಣೆಯನ್ನು ತೆಗೆಯಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾತನಾಡಿ, ಕನ್ನಡ ಚಲನಚಿತ್ರವನ್ನು ಕಡೆಗಣಿಸಿ ಪರ ಚಿತ್ರಕ್ಕೆ ಮಣೆ ಹಾಕಬಾರದು. ಬಾಹುಬಲಿ-2 ಚಲನಚಿತ್ರವನ್ನು ನಗರದ ನಾಲ್ಕು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿರುವುದು ಖಂಡನಿಯ ಎಂದರು. ಆಗೇ ಟಿಕೇಟ್ ಧರ ಕೂಡ ಬಾಲ್ಕನಿ 150 ಇರುವುದನ್ನು ಕೂಡ ಇಳಿಸಬೇಕು. ಒಂದು ಥಿಯೇಟರ್‌ನಲ್ಲಿ ಮಾತ್ರ ನಡೆಸಲು ಅವಕಾಶ ಕೊಡಬೇಕು. ಇಲ್ಲವಾದರೇ ಉಗ್ರ ಪ್ರತಿಭಟನೆ ಮಾಡಿ ಪರಭಾಷೆಯ ಯಾವ ಚಿತ್ರವನ್ನು ಪ್ರದರ್ಶನ ಮಾಡದಂತೆ ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡುತ್ತಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಹರೀಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಮ್, ವಸಂತ್ ಕುಮಾರ್, ಜಗನ್ನಾಥ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News