ಚೆಟ್ಟಳ್ಳಿಯಲ್ಲಿ ಅಶುಚಿತ್ವದ ವಾತಾವರಣ : ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

Update: 2017-04-30 15:31 GMT

ಮಡಿಕೇರಿ,ಎ.30 : ಚೆಟ್ಟಳ್ಳಿಯ ಪಟ್ಟಣದುದ್ದಕ್ಕೂ ರ್ದುವಾಸನೆ ಬೀರುತ್ತಿದ್ದು, ಜನರೆಲ್ಲ ಮೂಗುಮುಚ್ಚಿ ತೆರಳುವ ಪರಿಸ್ಥಿತಿ ಎದುರಾಗಿದೆ. ಕೆಲವೇ ಸಮಯದಲ್ಲಿ ಸಾಂಕ್ರಾಮಿಕ ರೋಗ ಹರಡುವ ಬೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು ಕಸದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಗ್ರಾಮಪಂಚಾಯಿತಿ ಸೋತಿದೆ ಎಂದು ಟೀಕಿಸಿದ್ದಾರೆ.
  
  ಹಲವು ವರ್ಷಗಳ ಹಿಂದೆ ಚೆಟ್ಟಳ್ಳಿ ಪಂಚಾಯಿತಿಯ ದನದ ದೊಡ್ಡಿಯಾಗಿದ್ದ ಕಟ್ಟಡವನೆಲ್ಲ ಕೆಡವಿ ಪಟ್ಟಣದ ಎಲ್ಲಾ ಕಸವನ್ನು ತಂದು ಸುರಿಯಾಲಾಗುತ್ತಿದೆ. ಕೋಳಿ ಪುಕ್ಕಗಳು, ಮಧ್ಯಪಾನದ ಬಾಟಲಿ, ಪ್ಯಾಕೆಟುಗಳು, ತರಕಾರಿ ತ್ಯಾಜ್ಯಗಳು,ಬೇಡದ ಬಟ್ಟೆ ಬರೆಗಳೆಲ್ಲ ನಿತ್ಯವೂ ರಾಶಿಯಾಗಿ ಬೀಳುತಿವೆ.

ಗ್ರಾಮ ಪಂಚಾಯಿತಿಯ ಸಭೆಗಳೆಲ್ಲ ಸಾರ್ವಜನಿಕರು ಹಲವು ಬಾರಿ ದೂರಿದರೂ ಶಾಶ್ವತ ಪರಿಹಾರ ಮಾತ್ರವೆಂಬ ಭರವಸೆಗಳು ಮಾತ್ರ ಸಿಗುತ್ತಿದೆ ಅಷ್ಟೇ. ಸುತ್ತಲು ಸಾರ್ವಜನಿಕರ ಮನೆಗಳು ಹಾಗೂ ಸಹಕಾರ ಸಂಘದ ಕಟ್ಟಡವುದು ತುಂಬಾ ತೊಂದರೆ ಅನುಭವಿಸುವ ಪರಿಸ್ಥಿತಿಯಾಗಿದೆ.

ಚೆಟ್ಟಳ್ಳಿಯ ಕಸದ ವಿಲೇವಾರಿಗೆ ಸೂಕ್ತ ಜಾಗದ ಕೊರತೆ ಇದ್ದುದರಿಂದ ಹಲವು ವರ್ಷಗಳಿಂದ ಪಂಚಾಯಿತಿ ಕಟ್ಟಡದ ಹಿಂಬದಿಯೆ ಕಸದ ತೊಟ್ಟಿಗಾಗಿ ಉಪಯೋಗಿಸಲಾಗಿದೆ ಕಸದ ಕೊಂಪೆಯಾಗಿವೆಯಾದರೂ ಈ ಜಾಗ ಪಂಚಾಯಿತಿ ಹಾಗೂ ಸಹಕಾರ ಸಂಘಗಳ ನಡುವೆ ಪೈಪೋಟಿ ನಡೆದು ವಿವಾದಕ್ಕೆ ಕಾರಣವಾಗಿದೆ.

 ಗ್ರಾಮ ಪಂಚಾಯಿತಿ ಪಟ್ಟಣದಲ್ಲಿ ಶುಚಿತ್ವವನ್ನು ಕಾಪಾಡಲು ಕಬ್ಬಿಣದ ಸಲಾಕೆಯ ತೊಟ್ಟಿಯನ್ನು ನಿರ್ಮಿಸಿ ಅಳವಡಿಸಲಾಗಿತ್ತು. ಕೆಲವು ಸಮಯದ ನಂತರ ಕೆಲವು ಕಸದ ತೊಟ್ಟಿಯೇ ಕಸದ ಕೊಂಪೆಯಲ್ಲೇ ಬಿದ್ದಿದೆ. ಕ್ಲೀನ್ ಚೆಟ್ಟಳ್ಳಿ ಸಂಘ ಹಾಗು ಚೆಟ್ಟಳ್ಳಿ ಗ್ರಾಮಪಂಚಾತಿ ಒಣಕಸವನ್ನು ಸುಡುವ ಯಂತ್ರವನ್ನು ಇಡಲಾಗಿತ್ತು. ಆದರೆ ಕೆಲವು ತಿಂಗಳವರೆಗೆ ಕಸವನ್ನು ಸುಟ್ಟು ಕಸದ ಕೊಂಪೆಯಲ್ಲೇ ಸೇರಿ ತುಕ್ಕು ಹಿಡಿಯುತ್ತಿದೆ.

ಪಂಚಾಯಿತಿಯ ಕಸವಿಲೇವಾರಿಯ ಸಮಸ್ಯೆಯಿದ್ದು ಸೂಕ್ತ ಜಾಗವನ್ನು ಸೂಚಿಸಲು ಮೇಲಧಿಕಾರಿಗಳಿಗೆ ತಿಳಿಸಿದರೂ ಈವರೆಗೆ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲವೆಂದು ಚೆಟ್ಟಳ್ಳಿ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಮಧುಸೂಧನ್ ತಿಳಿಸಿದ್ದಾರೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News