ಬೌದ್ಧ ಧರ್ಮದ ಪುರ್ನಜ್ಜೀವಕ ಡಾ.ಬಿ.ಆರ್.ಅಂಬೇಡ್ಕರ್: ಸುರೇಶ್

Update: 2017-04-30 16:19 GMT

ಚಾಮರಾಜನಗರ, ಎ.30: ನಗರದ ದೇವಾಂಗ ಭವನದಲ್ಲಿ ಜನ ಹಿತಾಶಕ್ತಿ ಹೋರಾಟ ವೇದಿಕೆಯಿಂದ ಸಂವಿಧಾನ ಶಿಲ್ಪಿ ಡಾ,ಬಿ,ಆರ್.ಅಬೇಂಡ್ಕರ್ ಅವರ 126ನೆ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನ ಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷರಾದ ರಾಮಸಮುದ್ರ ಸುರೇಶ್ ಬೌದ್ಧ ಧರ್ಮದ ಪುನರ್ ಜೀವನಕ್ಕೆ ಹೊತ್ತು ನೀಡಿ ಮರುಜೀವ ಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್ ಶತಮಾನಗಳಿಂದ ತುಳಿತಕ್ಕೆ ಒಳಗಾದ ಜನಾಂಗದ ದನಿಗೆ ಮುಖವಾಣಿಯಾಗಿ ಡಾ.ಅಂಬೇಡ್ಕರ್‌ ಅಸಮಾನತೆಯನ್ನು ಹೋಗಲಾಡಿಸಿ ಶೋಷಿತ ಸಮುದಾಯಕ್ಕೆ ಅರಿವು ಮತ್ತು ಆತ್ಮ ವಿಶ್ವಾಸ ತಂದುಕೊಟ್ಟರು ಹುಟ್ಟು ಸ್ವಾಭಿಮಾನಿ, ಪ್ರಭುದ್ದ ವಿಚಾರವಾದಿಯಾಗಿ ತಮ್ಮ ಕಾಲ ಮಾನವನ್ನು ಮೆಟ್ಟುನಿಂತರು ಹಾಗೂ ರಾಷ್ಟ್ರೀಯತವಾದಿಯಾಗಿ ಮಾನವ ಜನಾಂಗದ ಹಕ್ಕಿಗಾಗಿ ಹೋರಾಡಿದ ಮಹಾನ್ ಮಾನವಾತವಾದಿ ಎಂದರು.

ಗೋವಿಂದರಾಜು ಮಾತನಾಡಿ ರಾಷ್ಟ್ರದ ಸಾಮಾಜಿಕ,ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಚ್ಚಳಿಯದ ಧ್ರುವತಾರೆ ಡಾ.ಅಂಬೇಡ್ಕರರು ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸಮಾಜದ ಸಮಗ್ರ ವಿಕಾಸಕ್ಕಾಗಿ ಶ್ರಮಿಸಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಿ.ಎಸ್.ಎಸ್.ನ ಕೆರೆಹಳ್ಳಿ ಬಸವರಾಜು ಮಾತನಾಡಿ ಡಾ, ಬಿ,ಆರ್.ಅಂಬೇಡ್ಕರ್‌ರವರು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವಂತ ಜಗತ್ತಿನಲ್ಲೆ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ ಮುತ್ಸದ್ದಿ ಹಾಗೂ ಸಮಾನತೆ ಮತ್ತು ಭಾತೃತ್ವದ ನೆಲೆಗಟ್ಟಿನ ಮೇಲೆ ಅದರ್ಶ ಸಮಾಜದ ನಿರ್ಮಾಣ ಸಾಧ್ಯವೆಂದು ನಂಬಿ ಶೋಷಿತರ ಸರ್ವಾಂಗೀಣ ಪ್ರಗತಿಗಾಗಿ ಕ್ರಾಂತಿಕಾರಿಕ ಚಳುವಳಿಯನ್ನು ಹುಟ್ಟು ಹಾಕಿದ ಕೀರ್ತಿ ಡಾ.ಅಂಬೆಡ್ಕರ್ ಎಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ಕಾಡಳ್ಳಿ ನಾಗರಾಜು, ಧನಂಜಯ, ಬಂಗಾರಸ್ವಾಮಿ, ಚನ್ನಂಜಯ್ಯ, ಈಶ್ವರ್, ಇನ್ನುಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News