ಚಾಮರಾಜನಗರದಲ್ಲಿ ನೂತನ ಹೃದ್ರೋಗ ಕೇಂದ್ರ

Update: 2017-04-30 16:38 GMT

ಚಾಮರಾಜನಗರ, ಎ.30: ಚಾಮರಾಜನಗರದಲ್ಲಿ ನೂತನವಾಗಿ ಹೃದ್ರೋಗ ಕೇಂದ್ರ ಆರಂಭವಾಯಿತು.

ಬಿ.ಜಿ.ಎಸ್,ಅಪೋಲೋ ಹೃದ್ರೋಗ ಆಸ್ಪತ್ರೆ ಮೈಸೂರು ಇವರ ಸಹಯೋಗದಲ್ಲಿ ಚಾಮರಾಜನಗರದ ಜೋಡಿರಸ್ತೆಯ ಮೂರ್ತಿ ಪಾಯಿಂಟ್‌ನಲ್ಲಿ ಶನಿವಾರದಂದು ನೂತನ ಮಹದೇಶ್ವರ ಹೃದ್ರೋಗ ಕೇಂದ್ರ ಮತ್ತು ಡಯಾಗ್ನೋಸ್ಟಿಕ್ ಸೆಂಟರನ್ನು ಅಪೋಲೋ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಡಾ. ವಿನೋದ್ ಅಪ್ಪಯ್ಯ ಉದ್ಘಾಟಿಸಿದರು.

ಅವರು ಮಾತನಾಡಿ ಈ ಕೇಂದ್ರದಲ್ಲಿ ಹೃದ್ರೋಗಗಳಿಗೆ ಸಂಬಂಧಪಟ್ಟ ಎಲ್ಲಾ ತರಹದ ಪರಿಕ್ಷೆಗಳನ್ನು ಮಾಡುವಂತಹ ಉಪಕರಣಗಳು ಇರುವುದರಿಂದ ಹೃದ್ರೋಗ ರೋಗಿಗಳು ಈ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು, ಪ್ರತಿದಿನ ಹೃದ್ರೋಗ ನೂರಿತ ತಜ್ಞರಿಂದ ಸಮಾಲೋಚನೆ ನಡೆಸಲಾಗುವುದು ಹಾಗೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ವರ್ಗಯಿಸಲಾಗುವುದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಬಿ,ಪಿ.ಎಲ್ ಕಾರ್ಡ್ ಇರುವ ಫಲನುಭವಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಗುಡ್‌ಹಾಟ್ ಹೆಲ್ತ್‌ಕೇರ್ ನಿರ್ದೇಶಕ ಡಾ. ಮಹಮದ್‌ಅಹ್ಮದ್, ಹಾಗೂ ಪುಟ್ಟರಾಮು, ಡಾ.ಗುರುಪ್ರಸಾದ್ ಹೆಲ್ತ್‌ಕೇರ್ ಸಿಬಂದ್ಧಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News