ಪಕ್ಷದ ವರಿಷ್ಠರ ತೀರ್ಮಾನವನ್ನು ಸ್ವಾಗತಿಸುತ್ತೇನೆ-ಡಾ.ಜಿ.ಪರಮೇಶ್ವರ್

Update: 2017-04-30 17:51 GMT

ತುಮಕೂರು,ಎ.30:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಕಳೆದ ಐದಾರು ವರ್ಷಗಳಿಂದ ಕೆಲಸ ಮಾಡಿದ್ದೇನೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ ಅಧ್ಯಕ್ಷನಾಗಿ ನಾನು ಕೆಲಸ ಮಾಡುತ್ತಿದ್ದು ಪಕ್ಷದ ವರಿಷ್ಟರಿಗೆ ಈ ಕಾಂಬಿನೇಷನ್ ಬೇಡ ಎಂದರೆ ಬದಲಾವಣೆ ಮಾಡಬಹುದು ಅದನ್ನು ಸ್ವಾಗತ್ತಿಸುತ್ತೇನೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ನಗರಕ್ಕೆ ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಕೆ.ಪಿ.ಸಿ.ಸಿ ಅಧ್ಯಕ್ಷನಾಗಬೇಕೆಂದು ಯಾವುದೇ ರೀತಿಯ ಲಾಭಿ ಮಾಡಿರಲಿಲ್ಲ.ಪಕ್ಷದ ವರಿಷ್ಟರು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದರು ನಾನು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಕೆಲಸ ಮಾಡಿದ್ದೇನೆ.ಈಗ ಪಕ್ಷದ ವರಿಷ್ಟರು ಕೆ.ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುತ್ತೇವೆಂದರೆ ಅದಕ್ಕೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡರು ಬದ್ದನಾಗಿರುತ್ತೇನೆಂದು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸಹಜ ನಮ್ಮ ಪಕ್ಷಕ್ಕೂ ಇನ್ನೂ ಸ್ವಲ್ಪ ದಿನಗಳಲ್ಲೇ ಹಲವು ಮುಖಂಡರು ಬರುತ್ತಿದ್ದಾರೆ. ಜೆ.ಡಿ.ಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರ ಪಟ್ಟಿಯನ್ನು ಸ್ವಲ್ಪ ದಿನದಲ್ಲಿಯೇ ನೀಡುವುದಾಗಿ ತಿಳಿಸಿದರು.

ದಿಗ್ವಿಜಯ್ ಸಿಂಗ್ ಅನುಭವಿ ರಾಜಕಾರಣಿಯಾಗಿದ್ದು, ನಾಲ್ಕು ವರ್ಷ ರಾಜ್ಯದ ಉಸ್ತುವಾರಿ ವಹಿಸಿಕೊಂಡು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಪಕ್ಷದ ಸಂಕಷ್ಟ ಸನ್ನಿವೇಶದಲ್ಲಿ ನಮಗೆ ಸಲಹೆ ಸೂಚನೆ ನೀಡಿದ್ದಾರೆ.ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವೊಂದು ಬದಲಾವಣೆ ಮಾಡಲಾಗುತ್ತದೆ ಎಂದರು ತಿಳಿಸಿದರು

ರಾಜ್ಯದಲ್ಲಿ ಮುಂದೆ ಚುನಾವಣೆ ನಡೆಯುತ್ತದೆ ಆದ್ದರಿಂದ ಎಐಸಿಸಿ ಮುಖ್ಯಸ್ಥರು ಅವರನ್ನು ಬದಲಾವಣೆ ಮಾಡಿದ್ದಾರೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ.ವೇಣುಗೋಪಾಲ್ ಅವರು ರಾಜ್ಯಕ್ಕೆ ಬಂದಿರುವುದು ಸ್ವಾಗತಾರ್ಹ ಸಂಗತಿ ಅವರಿಗೂ ಸಾಕಷ್ಟು ಅನುಭವವಿದೆ. ಅವರು ಪಕ್ಷದ ಸಂಘಟನೆಯಿಂದ ಬಂದವರು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೇಂದ್ರ ಸಚಿವರಾಗಿ ಅನುಭವವಿದೆ.ಅವರು ರಾಜ್ಯಕ್ಕೆ ಬಂದಿರುವುದು ಸಂತೋಷವಾಗಿದೆ ಎಂದು ಕೆ.ಪಿ.ಸಿ.ಸಿ.ಅಧ್ಯಕ್ಷರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News