ಮಾಧ್ಯಮ ತಪ್ಪಿದರೆ ಸಮಾಜ ದಿಕ್ಕುತಪ್ಪುತ್ತದೆ:ಬಿ.ಶರತ್

Update: 2017-04-30 18:03 GMT

ಮಂಡ್ಯ, ಎ.30: ಸಮಾಜಕ್ಕೆ ಸರಿದಾರಿ ತೋರುವುದು ಮಾಧ್ಯಮಗಳ ಕರ್ತವ್ಯವಾಗಿದ್ದು, ತಪ್ಪುದಾರಿ ತೋರಿದರೆ ಸಮಾಜ ದಿಕ್ಕುತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದ್ದಾರೆ.

ನಗರದ ವಾರ್ತಾ ಭವನದಲ್ಲಿ ರವಿವಾರ ನಡೆದ ಪತ್ರಕರ್ತ ಬಸವರಾಜ ಹವಾಲ್ದಾರ್ ಅವರ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತಾನಾಡಿದ ಅವರು, ಸೃಜನಶೀಲತೆ, ಸಂವೇದನಾಶೀಲತೆ ಮಾಧ್ಯಮ ಸಹಕಾರಿಯಾಗಿವೆ ಎಂದರು.

ದೇಹದ ಮೆದುಳು ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳು ಉಂಟಾಗುತ್ತದೆ. ಅದೇ ರೀತಿ ಮಾಧ್ಯಮವೂ ಕೂಡ ಎಚ್ಚರದಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

 ಉನ್ನತ ಅಧಿಕಾರದಲ್ಲಿರುವವರು ತಾವು ಮಾಡಿದ್ದೆ ಸರಿ ಎಂಬ ಧೋರಣೆ ಹೊಂದಿರುತ್ತಾರೆ. ಅಂತಹವರ ತಪ್ಪುಗಳನ್ನು ಮಾಧ್ಯಮಗಳು ಎತ್ತಿಹಿಡಿದು ಸರಿದಾರಿಗೆ ತರಬೇಕು ಎಂದು ಹೇಳಿದರು.

 ನಗರಸಭೆ ಸದಸ್ಯ ಕೆ.ಸಿ. ರವೀಂದ್ರ, ಮತ್ತೀಕೆರೆ ಜಯರಾಂ, ಕೆ.ಎನ್. ರವಿ, ಕೆ.ಸಿ. ಮಂಜುನಾಥ್, ನಾಗೇಶ್, ಶ್ರೀನಿವಾಸ್, ಬಿ.ಪಿ.ಪ್ರಕಾಶ್, ನವೀನ, ಬಿ.ಟಿ.ಮೋಹನ್‌ಕುಮಾರ್, ಇತರ ಪತ್ರಕರ್ತರು ಉಪಸ್ಥಿತರಿದ್ದರು.

 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News