×
Ad

ವ್ಯಕ್ತಿ ಗೌರವ, ವ್ಯಕ್ತಿತ್ವ, ನಡವಳಿಕೆಯಿಂದ ವೃತ್ತಿ ಗೌರವ ಹೆಚ್ಚುತ್ತದೆ: ರವೀಶ್ ಕ್ಯಾತನಬೀಡು

Update: 2017-05-01 16:59 IST

ಚಿಕ್ಕಮಗಳೂರು, ಮೇ.1: ವ್ಯಕ್ತಿ ಗೌರವ, ವ್ಯಕ್ತಿತ್ವ, ನಡವಳಿಕೆಯಿಂದ ವೃತ್ತಿ ಗೌರವ ಹೆಚ್ಚುತ್ತದೆ. ಶರಣರು ಕಾಯಕದ ಮೂಲಕ ಕೈಲಾಸವನ್ನು ಕಾಣುವ ಸನ್ಮಾರ್ಗವನ್ನು ತೋರಿಸಿದರು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು ಹೇಳಿದರು.

ನಗರದ ಬಿ.ಎಂ.ಶ್ರೀ ರಸ್ತೆಯಲ್ಲಿರುವ ಶ್ರೀವಾರು ಕಾಂಪ್ಲೆಕ್ಸ್‌ನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ದೀಪ ಬೆಳಗಬೇಕಾದರೆ ಅದರ ಹಿಂದೆ ಅನೇಕ ದುಡಿಯುವ ವರ್ಗದ ಶ್ರಮವಿರುತ್ತದೆ. ಕುಂಬಾರರ ಹಣತೆ, ಒಕ್ಕಲಿಗರ ಹತ್ತಿ, ಗಾಣಿಗರ ಎಣ್ಣೆ ಸೇರಿಸಿ ದೀಪ ಹಚ್ಚಿದರೆ ಬೆಳಕು ಬೆಳಗುತ್ತದೆ. ಮನುಷ್ಯ ಸಮಾಜ ಬೆಳಗಬೇಕಾದರೆ ಎಲ್ಲಾ ವೃತ್ತಿ ಬಾಂಧವರು, ದುಡಿಯುವ ವರ್ಗದವರು ಸತ್ಯಶುದ್ಧ ಕಾಯಕದಿಂದ ತಮ್ಮ ಜೀವನವನ್ನು ನಡೆಸಬೇಕು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಪ್ರಭು, ವೈಷ್ಣವಿ ಟ್ರೇಡರ್ಸ್‌ ಮಾಲಕ ಕೃಷ್ಣಣ್ಣ, ರಮೇಶ್ ಟ್ರೇಡರ್ಸ್‌ನ ಮಾಲಕ ರಮೇಶ್, ಶಿಕ್ಷಕ ಸೋಮಶೇಖರ್, ನಿವೃತ್ತ ಶಿಕ್ಷಕ ತೀರ್ಥಾನಂದಪ್ಪ ಮಾತನಾಡಿದರು. ಬಸವದಳದ ಅಧ್ಯಕ್ಷ ಬಾಣೂರು ಚನ್ನಪ್ಪ ಪ್ರಾರ್ಥಿಸಿದರು. ಸವಿತಾ ಸಮಾಜದ ಟೈಟಾನಿಕ್ ರಮೇಶ್‌ ರನ್ನು ವಿಶ್ವ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವಿಸಿತು.

ಈ ಸಂದರ್ಭ ಸ್ನೇಹ ಟೈಲರ್ ಮಾಲಕ ಅನಿಲ್, ವೀಣಾ, ಮುದ್ರಕರಾದ ಗುರು, ಜಯರಾವ್, ನವೀನ್, ಕಾಶಿನಾಥ್, ಗಂಧದಗುಡಿ ಶಿವು, ಚೇತನ್ ಕಂಠಿ, ಲಕ್ಷ್ಮಣರಾಜು ಅರಸ್, ಸುನಿತ, ಚಂದ್ರು, ಪರಮೇಶ್ ಮತ್ತಿತರರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News